ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಟಂಟಂ ಪಲ್ಟಿ: 10ಕ್ಕೂ ಅಧಿಕ ಜನರಿಗೆ ಗಾಯ

Mainashree
Updated On : 11 Jan 2014, 11:47 am

ಮುಂಡರಗಿ: ತಾಲೂಕಿ ನಾಗರಹಳ್ಳಿ ಗ್ರಾಮದಿಂದ ಮುಂಡರಗಿಗೆ ಬರುತ್ತಿದ್ದ ಟಂಟಂ ಪಲ್ಟಿಯಾಗಿ 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ಶುಕ್ರವಾರ ಸಂಜೆ 4ರ ಸುಮಾರಿಗೆ ನಡೆದಿದೆ. ಗಾಯಗೊಂಡವರಿಗೆ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.ಗಾಯಗೊಂಡವರನ್ನು ಜಾಫರ್‌ಸಾಬ ಅಡವಿಸೋಮಾಪುರ, ನಿಂಗಪ್ಪ ಹಮ್ಮಿಗಿ, ದಾವಲಸಾಬ್ ಗುಮ್ಮಗೋಳ, ಲಾಲವ್ವ ಮುರಾರಿ, ಶೇಖರಪ್ಪ ತಂಟ್ರಿ, ಹಾಗೂ 4 ವರ್ಷದ ಮಗು ಸಂತೋಷ ಹೊಸಮನಿ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement