ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ: ವಿವೇಕಾನಂದರ ಕಿರುಪುಸ್ತಕ ವಿತರಣೆ

Rashmi Kasaragodu
Updated On : 12 Jan 2014, 1:47 am

ಗದಗ: ಕರ್ನಾಟಕ ಸರ್ಕಾರದ ಗದಗ ಜಿಲ್ಲಾ ಸರ್ಕಾರಿ ನೌಕರ ಸಂಘದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲ ನೌಕರರಿಗೆ ಸ್ವಾಮಿ ವಿವೇಕಾನಂದರವರ ಕಿರು ಪುಸ್ತಕವನ್ನು ನೀಡಲಾಯಿತು. ಸರ್ವ ಧರ್ಮ ಹಿತೈಷಿ ಸೇವಾ ಸಂಘದ ಅಧ್ಯಕ್ಷ ಚೆನ್ನಾರಡ್ಡಿ ಗೂಳರಡ್ಡಿಯವರು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಹಿರಿಯ ನ್ಯಾಯವಾದಿ ದಿ. ಎನ್.ಎ. ಗೂಳರಡ್ಡಿ ಅವರ ಸ್ಮರಣಾರ್ಥ ಸ್ವಾಮಿ ವಿವೇಕಾನಂದರ ಕಿರು ಪುಸ್ತಕಗಳನ್ನು ವಿತರಿಸಿದರು. ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರೇಮನಾಥ ಗರಗ, ಕಾರ್ಯದರ್ಶಿ ರವಿ ಗುಂಜಿಕರ, ಶಿಕ್ಷಕ ಉಣ್ಣಿಮಠ, ಶರಣಪ್ಪ ಒಕ್ಕಳದ, ದೇವಪ್ಪ ಬಾರಕೇರ ಸೇರಿದಂತೆ ಗದಗ ಜಿಲ್ಲಾ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement