ಗುಣಮಟ್ಟದ ಕಾಮಗಾರಿ ನಿರ್ವಹಿಸಿ: ಶಾಸಕ ದೊಡ್ಡಮನಿ
ಮುಂಡರಗಿ: ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡುವ ಮೂಲಕ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಗುತ್ತಿಗೆದಾರರಿಗೆ ಸಹಕರಿಸಬೇಕು ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು. ಶುಕ್ರವಾರ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ರು. 20.72 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ದೃವಕುಮಾರ ಹೊಸಮನಿ, ಗುತ್ತಿಗೆದಾರ ಪ್ರದೀಪಗೌಡ ಗುಡದಪ್ಪನವರ, ಎ.ಕೆ. ಹಂಚಿನಾಳ, ಅಬ್ದುಲ್ ಖುರೇಶಿ, ಎ.ಪಿ. ದಂಡಿನ, ಪರಶುರಾಮ ಕಿಳ್ಳಿಕ್ಯಾತರ, ಹುಸೇನಸಾಬ ತಪ್ಪಡಿ, ಮಲ್ಲವ್ವ ಚೌಡಕಿ, ಎಸ್.ಎಸ್. ಪಾಟೀಲ, ಎಸ್.ಎಸ್. ಕೋದಾಂಪುರ, ತೋಟಪ್ಪ ಲಿಂಬಿಕಾಯಿ, ಹನುಮಪ್ಪ ಡೊಳ್ಳಿನ, ಶಂಕ್ರಪ್ಪ ಹನುಮಸಾಗರ, ಹನುಮಂತಪ್ಪ ಕೊಳಲ, ದೇವಪ್ಪ ಶೀರನಹಳ್ಳಿ ಸೇರಿದಂತೆಅನೇಕರು ಉಪಸ್ಥಿತರಿದ್ದರು.