ಗ್ರಾಮ ಸ್ವರಾಜ್ಯವೇ ಕಾಂಗ್ರೆಸ್ ಉದ್ದೇಶ: ಜಿ.ಎಸ್. ಪಾಟೀಲ
ಗಜೇಂದ್ರಗಡ: ಗಾಂಧಿಜೀಯವರ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ದಿಟ್ಟ ನಡೆಯಲ್ಲಿ ಸಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಸಮೀಪದ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಜಿಗೇರಿ ಗ್ರಾಮ ಹಾಗೂ ತಾಂಡಾದಲ್ಲಿ ಜಲ ನಿರ್ಮಲ, ಜಿಪಂ ಅನುದಾನದಡಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಜಿಗೇರಿಯ ಶ್ರೀಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟಿಲ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಮಾಳೋತ್ತರ, ಗಜೇಂದ್ರಗಡ ಬ್ಲಾಕ್ ಕಮಿಟಿ ಅಧ್ಯಕ್ಷ ವೀರಣ್ಣ ಸೊನ್ನದ, ವಿ.ಆರ್. ಗುಡಿಸಾಗರ, ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಗ್ರಾಪಂ ಸದಸ್ಯ ಮುತ್ತಣ್ಣ ಕೊಪ್ಪಳ, ಎಂ.ಬಿ. ಅವಾರಿ, ಮುರ್ತುಜಾ ಡಾಲಾಯತ್ ಮುಂತಾದವರಿದ್ದರು.