ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಟಿ. ನಾರಾಯಣ ಸ್ವಾಮಿಗೆ ಹೋರಾಟ ಸಮಿತಿ ಮನವಿ

Rashmi Kasaragodu
Updated On : 12 Jan 2014, 1:46 am

ಗದಗ:  ಕೇಂದ್ರ ಸರ್ಕಾರದ ರೇಲ್ವೆ ಬೋರ್ಡ್ನಲ್ಲಿ ಪ್ರಯಾಣಿಕರ ಸುರಕ್ಷತಾ ವಿಭಾಗದ ಅಧ್ಯಕ್ಷರಾಗಿ ನೇಮಕವಾಗಿ ಗದಗ ಭಾಗದ ರೇಲ್ವೆ ಸಮಸ್ಯೆಗಳ ಕುರಿತು ಅರಿತುಕೊಳ್ಳಲು ಈಚೆಗೆ ಗದಗಕ್ಕೆ ಟಿ. ನಾರಾಯಣ ಸ್ವಾಮಿ ಆಗಮಿಸಿದ್ದರು. ಅವರಿಗೆ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ಕುತುಬುದ್ದೀನ ಖಾಜಿ, ವಿಜಯ ಮುಳಗುಂದ, ಬಸವಣ್ಣೆಯ್ಯ ಹಿರೇಮಠ, ಸುರೇಶ ಬೆಳಂಕರ ಅವರು ಪ್ರಯಾಣಿಕರ ಸುರಕ್ಷತೆ ಹಾಗೂ ಗದಗ ಭಾಗದ ಬೇಡಿಕೆಗಳ ಕುರಿತು ಮನವಿ ಅರ್ಪಿಸಿದರು. ನಿಲ್ದಾಣ, ರೈಲುಗಳಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ ಕಲ್ಪಿಸುವುದರೊಂದಿಗೆ ರಾತ್ರಿ ವೇಳೆಯಲ್ಲಿ ನಡೆಯುವ ಕಳ್ಳತನ ಹಾಗೂ ಪ್ರಯಾಣಿಕರಿಗೆ ಬೆದರಿಕೆಗಳನ್ನು ಹೋಗಲಾಡಿಸುವುದು, ಗದಗ ಭಾಗದ ಪ್ರಮುಖ ಬೇಡಿಕೆಗಳು ಹಲವು ರೈಲು ಸೌಕರ್ಯಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement