ತ್ಯಾಗವೀರ ಲಿಂಗರಾಜರ ಬದುಕು ಆದರ್ಶ
ಲಕ್ಷ್ಮೇಶ್ವರ: ಶಿಗ್ಲಿಯಲ್ಲಿ ಜನಿಸಿದ ತ್ಯಾಗವೀರ ಶಿರಸಂಗಿ ಲಿಂಗರಾಜರು ತಾವು ಬದುಕಿರುವಾಗಲೇ ತಮ್ಮ ಎಲ್ಲ ಸಿರಿ ಸಂಪತ್ತನ್ನು ಬೇರಯವರಿಗೋಸ್ಕರ ದಾನ ಮಾಡಿದ ಕೀರ್ತಿ ಹೊಂದಿದವರಾಗಿದ್ದಾರೆ ಎಂದು ಲಿಂಗರಾಜ ಉತ್ಸವ ಸಮಿತಿ ಅಧ್ಯಕ್ಷ ಶಂಕ್ರಣ್ಣ ದೇಸಾಯಿ ಹೇಳಿದರು. ಸಮಿಪದ ಶಿಗ್ಲಿ ಗ್ರಾಮದಲ್ಲಿ ಶುಕ್ರವಾರ ಶಿರಸಂಗಿ ಲಿಂಗರಾಜರ 153ನೇ ಜಯಂತ್ಯುತ್ಸವದಲ್ಲಿ ಲಿಂಗರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದರು. ವೀರಣ್ಣ ಹತ್ತಿಕಾಳ, ಡಾ. ಆರ್.ಎನ್. ತೇಲ್ಕರ್, ಎಚ್.ಎಫ್. ತಳವಾರ, ಸೋಮಣ್ಣ ಡಾಣಗಲ್, ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ, ರಾಮಣ್ಣ ಹುಲಗೂರ, ಮಹದೇವಪ್ಪ ಹುಲಗೂರ, ವೀರಣ್ಣ ಪವಾಡದ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಶೋಕ ಶಿರಹಟ್ಟಿ, ಸಿ.ಆರ್. ಗೋಕಾವಿ, ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷ ಸಿದ್ದಣ್ಣ ಯಲಿಗಾರ, ಗ್ರಾಪಂ ಸದಸ್ಯ ಭರತ ಬಳಿಗಾರ ಇತರರಿದ್ದರು.
ಸುವರ್ಣ ಲೇಡೀಸ್ ಕ್ಲಬ್: ಕೇಕ್ ಮಾಡುವ ಸ್ಪರ್ಧೆ
ಗದಗ: ಸುವರ್ಣ ಲೇಡೀಸ್ ಕ್ಲಬ್ನಿಂದ ಸದಸ್ಯರಿಗೆ ಕೇಕ್ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸುಮಾ ನಾರಪ್ಪನವರು, ದ್ವಿತೀಯ ಬಹುಮಾನ ಅನಿತಾ ವೆರ್ಣೇಕರ, ತೃತೀಯ ಬಹುಮಾನ, ಕಲಾವತಿ ಅಲಬೂರ ಪಡೆದುಕೊಂಡರು. ಈ ಬಹುಮಾನಗಳನ್ನು ಭಾರತಿ ಕಲಾ ಕೇಂದ್ರದಿಂದ ಕೊಡಲಾಯಿತು. ಸುವರ್ಣ ಲೇಡೀಸ್ ಕ್ಲಬ್ ಅಧ್ಯಕ್ಷೆ ಶೈಲಜಾ ಕವಲೂರ, ಭಾರತಿ ಬದಿ, ವಿಜಯ ವೈದ್ಯ, ಸುಮನ ಪಾಟೀಲ, ಅನುರಾಧ ಬಸುವಾ, ಗಿರಿಜಾ ಅಕ್ಕುರು ಇದ್ದರು.
ಗದಗ: ಇಂದು ಯುವ ಸ್ಫೂರ್ತಿದಾಯಕ ಮಹೋತ್ಸವ
ಗದಗ: ರಾಷ್ಟ್ರೀಯ ಯುವಕರ ದಿನದ ಅಂಗವಾಗಿ ಜ. 12ರ ಭಾನುವಾರ ಸಂಜೆ 5.30ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಯುವ ಸ್ಫೂರ್ತಿದಾಯಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಶ್ರೀಗಳು ಸಾನ್ನಿಧ್ಯ ವಹಿಸುವರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಈಶ್ವರೀಯ ವಿವಿಯ ಸಂಚಾಲಕಿ ಬ್ರಹ್ಮಕುಮಾರಿ ಜಯಂತಿ ಯುವಸಂದೇಶ ನೀಡುವರು. ಶಿವಾನಂದ ಹೂಗಾರ, ಗದಗ ಪಿಎಸ್ಐ ಮಹಾಂತೇಶ, ನಗರಸಭೆ ಸದಸ್ಯ ಮಂಜುನಾಥ ಮುಳಗುಂದ, ಅನಿಲ ಶಿಂಗಟಾಲಕೇರಿ, ರಾಘವೇಂದ್ರ ಯಳವತ್ತಿ, ಲಿಂಗನಗೌಡ ಹರ್ತಿ, ವೀರೇಶ ಬಸನಗೌಡ, ಎಸ್.ಎನ್. ಗುಗ್ಗರಿ, ಬಾಹುಬಲಿ ಜೈನರ, ಮುರಳಿ, ವೆಂಕನಗೌಡ ಗೋವಿಂದಗೌಡ್ರ, ಗೋಪಾಲ ಕಬಾಡಿ, ಪ್ರಭುರಾಜಗೌಡ ಪಾಟೀಲ, ವೆಂಕಟೇಶ ಕಟ್ಟಿಮನಿ, ಕೆ.ಎಲ್. ಕರಿಗೌಡ್ರ, ಜಯತೀರ್ಥ ಜೋಶಿ, ಎಂ.ಎಸ್. ಮುಳಗುಂದ, ಗಜಾನನ ವೆರ್ಣೇಕರ, ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.