ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೇವಸ್ಥಾನ ಜೀರ್ಣೋದ್ಧಾರಕ್ಕೆ ರು. 3 ಲಕ್ಷ ಅನುದಾನ

Rashmi Kasaragodu
Updated On : 12 Jan 2014, 1:49 am

ಗಜೇಂದ್ರಗಡ:  ಕೊಡಗಾನೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾದ ಜೀರ್ಣೋದ್ಧಾರಕ್ಕಾಗಿ ರು. 3 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.
ಈಚೆಗೆ ಸಮೀಪದ ಕೊಡಗಾನೂರ ಗ್ರಾಮದಲ್ಲಿ ಜಿಪಂ ವತಿಯಿಂದ ರು. 9.79 ಲಕ್ಷ ಅನುದಾನದಲ್ಲಿ ನಿತ್ಯ 2 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕ ಸೇವೆಗೆ ಸಮರ್ಪಿಸಿದ ಬಳಿಕ ಗ್ರಾಮದ ವೀರಭದ್ರೇಶ್ವರ ದೇಗುಲ ಆವರಣದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರ ಪ್ರತಿಯೊಬ್ಬ ಪ್ರಜೆಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಾವಿರಾರು ಕೋಟಿ ಅನುದಾನ ನೀಡಿ ಶುದ್ಧ ನೀರು ಒದಗಿಸುತ್ತಿದೆ. ಅಮೂಲ್ಯವಾದ ಜೀವ ಜಲವನ್ನು ವ್ಯರ್ಥ ಮಾಡದೇ ಸರ್ವರೂ ನೀರಿನ ಸದ್ಬಳಕೆ ಮಾಡಿ ಸರ್ಕಾರದ ಯೋಜನೆ ಸಾರ್ಥಕಗೊಳಿಸಿ ಎಂದರು.
ಚಂದ್ರಶೇಖರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪಿ.ಬಿ. ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶರಣಪ್ಪ ಕಡಬಲಕಟ್ಟಿ, ವಿ.ಆರ್. ಗುಡಿಸಾಗರ, ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಜಿಲ್ಲಾ ಉಪಾಧ್ಯಕ್ಷ ಎಸ್.ಎಂ. ಆರಗಿದ್ದಿ, ಮೋಹನಸಾ ರಾಯಬಾಗಿ, ಗ್ರಾಪಂ ಸದಸ್ಯ ಕೊಟ್ರಪ್ಪ ಹೂಗಾರ, ಪಿಡಿಒ ಎಸ್.ಬಿ. ಕಡಬಲಕಟ್ಟಿ, ಚನ್ನವೀರಯ್ಯ ಹಿರೇಮಠ, ವೀರಯ್ಯ ಪೂಜಾರ, ಕಾರ್ಯದರ್ಶಿ ಎಂ.ಎಂ. ಗೊಡೇಕಾರ, ಶಶಿಧರ ವಕ್ಕಲರ, ಕೊಟ್ರೇಶ ಚಿಲಕಾ,    ವೀರಯ್ಯ ಬಾಳಿಕಾಯಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement