ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೇಶಿ ಸಾಹಿತ್ಯ ಸಮ್ಮೇಳನಕ್ಕೆ ಹಳ್ಳಿಕೇರಿಮಠ ಆಯ್ಕೆ

Rashmi Kasaragodu
Updated On : 12 Jan 2014, 1:47 am

ಗದಗ: ಗುರುಬಸವೇಶ್ವರ ಸಂಸ್ಥಾನಮಠ ಹುಲಸೂರು, ಬಸವ ಕಲ್ಯಾಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಂಘ ಬೀದರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜ. ಬಸವಕುಮಾರ ಶಿವಯೋಗಿಗಳ 38ನೇ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವ- 2014ರ ಅಂಗವಾಗಿ ಜ. 11 ಮತ್ತು 12ರಂದು ರಾಜ್ಯದಲ್ಲೇ ಪ್ರಥಮ ಬಾರಿಗೆ ಬಸವ ಕಲ್ಯಾಣದ ಮುಕರಂಬಾದಲ್ಲಿ ಜರುಗಲಿರುವ ಅಖಿಲ ಕರ್ನಾಟಕ ಪ್ರಥಮ ದೇಶಿ ಸಾಹಿತ್ಯ ಸಮ್ಮೇಳನಕ್ಕೆ ಜಾನಪದ ಕಲಾವಿದ, ಯುವ ಸಾಧಕ ರತ್ನ ಪ್ರಶಸ್ತಿ ವಿಜೇತ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ-ಶಿರೂರು ಗ್ರಾಮದ ಗವಿಸಿದ್ದಯ್ಯ ಹಳ್ಳಿಕೇರಿಮಠ ಆಯ್ಕೆಯಾಗಿದ್ದಾರೆ. ಜಾನಪದ ಸಾಹಿತ್ಯ ಮತ್ತು ಯುವಜನತೆ ಕುರಿತು ಪ್ರಬಂಧ ಮಂಡಿಸಲಿದ್ದಾರೆ.  ಸಮ್ಮೇಳನದಲ್ಲಿ ಸಾವಯವ ಕೃಷಿ ಚಿಂತನಾ ಗೋಷ್ಠಿ, ಹೈನುಗಾರಿಕೆ, ಜಾನಪದ ಗೋಷ್ಠಿ,  ್ಠ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸ್ವಾಗತ ಕಮಿಟಿಯ ಸುರೇಶ ಚನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement