ಮನುಷ್ಯ-ಮನುಷ್ಯನ ನಡುವೆ ಜಾತಿ ಭೇದ ಹೀನ ಕಾರ್ಯ
ಗದಗ: ಮನುಷ್ಯ ಮನುಷ್ಯನ ನಡುವೆ ಜಾತಿ ಭೇದ ಮಾಡುವುದಕ್ಕಿಂತ ಹೀನ ಕಾರ್ಯ ಬೇರೊಂದಿಲ್ಲ. ಶಿಕ್ಷಣ ಸಾಧನೆ, ಸ್ವಾಭಿಮಾನ, ಜಾಗೃತಿ ಮೂಲಕ ಎಲ್ಲರೂ ಅಭಿವೃದ್ಧಿ ಸಾಧಿಸಬಹುದು ಎಂದು ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು. ತೋಂಟದಾರ್ಯ ಮಠದಲ್ಲಿ ನಡೆದ 2153ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹರ್ಡೇಕರ ಮಂಜಪ್ಪ ಪ್ರಶಸ್ತಿ ದೊರೆತ ನಿಮಿತ್ತ ಸತ್ಕರಿತರಾಗಿ ಮಾತನಾಡಿದ ಸಾಹಿತಿ ಡಾ. ರಾಜೇಂದ್ರ ಗಡಾದ ತಮ್ಮ ಸಾಧನೆಗೆ ಪೂಜ್ಯರ ಆಶೀರ್ವಾದ ಪ್ರೋತ್ಸಾಹಗಳು ಕಾರಣ ಎಂದರು. ಹಿರೇಹಡಗಲಿಯ ನಾಗಪ್ಪ ಭಜಂತ್ರಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಂದೀಶ್ವರ ಮಠದ ವಿದ್ಯಾರ್ಥಿಗಳಾದ ಮಲಿಯಪ್ಪ ಡೊಳ್ಳಿನ, ಮಾರುತಿ ಶಿಂಗಟಾಲೂರ ಇವರಿಂದ ಧರ್ಮಗ್ರಂಥ ಪಠಣ ಹಾಗೂ ಧರ್ಮಚಿಂತನ ನಡೆಯಿತು.