ಮಹಿಳೆಯರು ವೃತ್ತಿ ಶಿಕ್ಷಣ ಪಡೆಯಿರಿ: ಪಾಂಡಪ್ಪ ರೆಡ್ಡಿ
ಗದಗ: ಮಹಿಳೆಯರು ವೃತ್ತಿ ಶಿಕ್ಷಣ ಪಡೆಯುವ ಮೂಲಕ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ಪಾಂಡಪ್ಪ ರೆಡ್ಡಿ ಅಭಿಪ್ರಾಯ ಪಟ್ಟರು. ಈಚೆಗೆ ನಗರದ ರೂರಲ್ ಹೆಲ್ತ್ ಕೇರ್ ಸೆಂಟರ್ ಹಾಗೂ ದಿಶಾ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ಮಹಿಳೆಯರಿಗಾಗಿ ಏರ್ಪಡಿಸಿದ್ದ ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪಾಲಕ, ಪೋಷಕರು ಹೆಣ್ಣು ಮಗುವಿಗೂ ಉತ್ತಮ ಶಿಕ್ಷಣ ನೀಡಬೇಕು. ಮಹಿಳೆಯರು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಅಥವಾ ಸ್ವಯಂ ಉದ್ಯೋಗವನ್ನು ಕೈಗೊಳ್ಳಬೇಕು. ಪುರುಷರಷ್ಟೇ ಮಹಿಳೆಯರೂ ಸರಿಸಮನಾಗಿ ಎಲ್ಲ ರಂಗದಲ್ಲಿಯೂ ಮುನ್ನಡೆ ಸಾಧಿಸುತ್ತಿರುವುದು ಸ್ವಾಗತಾರ್ಹ ಎಂದರು. ಶಕುಂತಲಾ ರೆಡ್ಡಿ ಮಾತನಾಡಿದರು. ಶಿಕ್ಷಕಿ ಎಸ್.ಪಿ. ರೆಡ್ಡಿ, ಟಿ.ಎಂ. ಕಂಠಿ, ಎಸ್.ವಿ. ಚವಡಿ, ಮಹಾವೀರ ಹೊಂಬಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.