ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹ

Rashmi Kasaragodu
Updated On : 12 Jan 2014, 1:49 am

ನರೇಗಲ್ಲ:  ಜನರಲ್ಲಿ ಅನಗತ್ಯವಾಗಿ ಮನೆ ಮಾಡಿರುವ ಮೂಢನಂಬಿಕೆಗಳನ್ನು ನಿಷೇಧಿಸಲು ಸರ್ಕಾರ ಈಗಾಗಲೇ ಕಾಯ್ದೆ ಮಾಡಿರುವುದು ಸ್ತುತ್ಯಾರ್ಹ. ಅದನ್ನು ಆದಷ್ಟು ಬೇಗ ಜಾರಿಗೊಳಿಸಬೇಕು ಎಂದು ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಸಿ.ವಿ. ವಂಕಲಕುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಸರ್ವ ಸಮ್ಮತವಾದ ಮೂಢನಂಬಿಕೆಗಳನ್ನು ನಿಷೇಧಿಸುವ ಕಾಯ್ದೆಯನ್ನು ತಕ್ಷಣಕ್ಕೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದು ವಂಕಲಕುಂಟಿ ಹೇಳಿದ್ದಾರೆ.
14ರಂದು ಕಲ್ಮೇಶ್ವರ ಜಾತ್ರೆ
ಗದಗ:  ತಾಲೂಕಿನ ಪಾಪನಾಶಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ರಥೋತ್ಸವ ಜ. 14ರಂದು ಜರುಗಲಿದೆ. ಜ. 14ರಂದು ಬೆಳಗ್ಗೆ 6ಕ್ಕೆ ಕಲ್ಮೇಶ್ವರ ಮೂರ್ತಿಗೆ ರುದ್ರಾಭಿಷೇಕ, ನಂತರ ಅನ್ನಸಂತರ್ಪಣೆ ಹಾಗೂ ಸಂಜೆ 5ಕ್ಕೆ ವಿಜೃಂಭಣೆಯ ರಥೋತ್ಸವ ಜರುಗುವುದು.
ರಾತ್ರಿ 10.45ಕ್ಕೆ ಕಲ್ಮೇಶ್ವರ ನಾಟ್ಯ ಸಂಘದದಿಂದ ಪಾಪದ ಪಿಂಡ ಹೊತ್ತ ಪತಿವ್ರತೆ ಅರ್ಥಾತ್ ಮತ್ತೆ ಪಡೆದ ಮುತ್ತೈದೆಯ ಭಾಗ್ಯ ಎಂಬ ಸಾಮಾಜಿಕ ಹಾಗೂ ಕೌಟುಂಬಿಕ ನಾಟಕ ಜರುಗುವುದು. ಜ. 15ರಂದು ಸಂಜೆ 5ಕ್ಕೆ ಕಡುಬಿನ ಕಾಳಗ ನಂತರ ಲಘು ರಥೋತ್ಸವ ಜರುಗುವುದೆಂದು ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

11ಜಿಡಿಜಿ13ಬಿ
ಪಾಪನಾಶಿ ಗ್ರಾಮದ ಕಲ್ಮೇಶ್ವರ ಮೂರ್ತಿ

ಕಲಿಕೋತ್ಸವದಿಂದ ಪ್ರಗತಿ ತಿಳಿಯಲು ಸಾಧ್ಯ
ಲಕ್ಷ್ಮೇಶ್ವರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಕಲಿಕೋತ್ಸವ ಸಹಕಾರಿಯಾಗಿದೆ ಎಂದು ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಅಭಿಪ್ರಾಯ ಪಟ್ಟರು.
ಶನಿವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 4ರಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಯ ಮಕ್ಕಳ ಕಲಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡುವುದಿಲ್ಲ ಎನ್ನುವ ಮನೋಭಾವನೆ ಪಾಲಕರಲ್ಲಿದೆ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಇರುವ ಕೀಳರಿಮೆಯನ್ನು ತೊಡೆದು ಹಾಕಿ ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡುವ ಮೂಲಕ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲವೆಂಬುದನ್ನು ತೋರಿಸಿಕೊಡುವ ಕಾರ್ಯವನ್ನು ಸರ್ಕಾರಿ ಶಾಲೆಗಳ ಶಿಕ್ಷಕರು ಮಾಡಬೇಕಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಶಿರಹಟ್ಟಿ ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಕೆ.ಡಿ. ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ, ಪುರಸಭೆ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಜಿಪಂನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನಿರ್ಮಲಾ ಬರದೂರ, ಬಿ.ಎಸ್. ಈಳಗೇರ, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹರ್ಲಾಪುರ, ಎಸ್.ವಿ. ಅಂಗಡಿ, ಕಸಾಪ ಅಧ್ಯಕ್ಷ ಕೆ.ಎ.ಬಳಿಗೇರ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಕೋರದಾಳ ಮುಂತಾದವರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಜೆ.ಬಿ. ಗುಡಿ ಸ್ವಾಗತಿಸಿದರು. ಶಿಕ್ಷಕ ಈಶ್ವರ ಮೇಡ್ಲೇರಿ ನಿರೂಪಿಸಿದರು. ಪ್ರಭಾರಿ ಮುಖ್ಯಾಧ್ಯಾಪಕಿ ಡಿ.ಎಫ್. ಪಾಟೀಲ ವಂದಿಸಿದರು.

11ಜಿಡಿಜಿ13ಸಿ
ಕಲಿಕೋತ್ಸವವನ್ನು ಎಂ.ಎಸ್. ದೊಡ್ಡಗೌಡ್ರ ಉದ್ಘಾಟಿಸಿದರು.

ವಿಶೇಷ ಪೂಜೆ
ಗಜೇಂದ್ರಗಡ: ಐತಿಹಾಸಿಕ ಹಿನ್ನಲೆಯುಳ್ಳ ಸಮೀಪದ ಕೊಡಗಾನೂರ ಗ್ರಾಮದ ವೀರಭದ್ರೇಶ್ವರ ದೇಗುಲಕ್ಕೆ ಶಾಸಕ ಜಿ.ಎಸ್. ಪಾಟೀಲ ಈಚೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಹಿರೇಮಠ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement