ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯುವ ಕಾಂಗ್ರೆಸ್ಗೆ ಅಶೋಕ ಮಂದಾಲಿ ಆಯ್ಕೆ

Rashmi Kasaragodu
Updated On : 12 Jan 2014, 1:48 am

ಗದಗ: ಇತ್ತೀಚೆಗೆ ನಡೆದ ರಾಜ್ಯ ಯುವ ಕಾಂಗ್ರೆಸ್ನ ಆಂತರಿಕ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ವಿಧಾನಸಭೆ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷರಾಗಿ ಅಶೋಕ ಮಂದಾಲಿ 120 ಮತಗಳನ್ನು ಗಳಿಸಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಂತೋಷ ರಾಮೇನಹಳ್ಳಿ (23 ಮತ), ಪ್ರಧಾನ ಕಾರ್ಯದರ್ಶಿಗಳಾಗಿ ಶಿವು ನಾಯಕ, ಶರಣಪ್ಪ ಬೋಳನವರ, ಪ್ರಕಾಶ ಕಣಗಿನಹಾಳ ಆಯ್ಕೆಯಾದರು. ಹಾವೇರಿ ಡಿಸಿಸಿ ಕಚೇರಿಯಲ್ಲಿ ಶುಕ್ರವಾರ ಮತ ಎಣಿಕೆ ನಡೆಯಿತು. ಹಾವೇರಿ ಲೋಕಸಭಾ ಕ್ಷೇತ್ರದ ಯುವ ಉಪಾಧ್ಯಕ್ಷ ಮಂಜುನಾಥ ಮುಳಗುಂದ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಜಂಟಿ ಕಾರ್ಯದರ್ಶಿ ಉಮರ್ ಫಾರೂಕ್ ಹುಬ್ಬಳ್ಳಿ, ವೆಂಕಟೇಶ ಐಲಿ, ರಾಮು ಜೀರಬಂಡಿ, ಮಂಜುನಾಥ ಪಾಟೀಲ, ಈರಣ್ಣ ಹಂಪನ್ನವರ, ಅಸ್ಪಾಕ ಪಾಟೀಲ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement