ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶುದ್ಧ ಕುಡಿವ ನೀರಿನ ಯೋಜನೆ ವರದಾನ

Rashmi Kasaragodu
Updated On : 12 Jan 2014, 1:49 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 11
ಗ್ರಾಮೀಣ ಭಾಗದ ಜನ ಫ್ಲೋರೈಡ್ಯುಕ್ತ ನೀರು ಸೇವಿಸಿ ನರ ದೌರ್ಬಲ್ಯ, ಮೊಳಕಾಲು ನೋವು, ಪಾರ್ಶ್ವವಾಯು ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು.
ಫ್ಲೋರೈಡ್ಯುಕ್ತ ನೀರನ್ನು ತಡೆಗಟ್ಟಿ ರಾಜ್ಯದ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ರಾಜ್ಯ ಸರ್ಕಾರದ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಈಚೆಗೆ ಸಮೀಪದ ರಾಜೂರ, ಕೊಡಗಾನೂರ, ವೀರಾಪುರ ಗ್ರಾಮದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕ ಜಿ.ಎಸ್. ಪಾಟೀಲ ಜನಸೇವೆಗೆ ಸಮರ್ಪಿಸಿ ಮಾತನಾಡಿದರು.
ಸರ್ಕಾರ ಗ್ರಾಮಗಳಲ್ಲಿ ಡಿ ಫ್ಲೋರೈಡೇಶನ್ ಫಟಕ ಸ್ಥಾಪಿಸಿ ಜನತೆಗೆ ಶುದ್ಧ ಕುಡಿಯುವ ನೀರು ದೊರಕುವಂತೆ ಮಾಡಿದೆ. ಮೂರು ಗ್ರಾಮದಲ್ಲಿ ಡಿ. ಪ್ಲೋರೈಡೇಶನ್ ಫಟಕವನ್ನು ಸ್ಥಾಪಿಸಿರುವುದು ಜನತೆಗೆ ಅನುಕೂಲವಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಕೇಂದ್ರ ಪ್ರಾರಂಭವಾಗಿವೆ. ಗ್ರಾಮೀಣ ಜನರಿಗೆ 10 ಪೈಸೆಗೆ ಒಂದು ಲೀಟರ್ ನೀರು ಸಿಗುತ್ತಿದೆ. ಇನ್ನಿತರ ಊರುಗಳಲ್ಲಿ ಇಂತಹ ಘಟಕ ಜನ ಸೇವೆಗೆ ನೀಡಲಾಗಿದೆ. ಈಗಾಗಲೇ ರು. 2ಗೆ 20 ಲೀಟರ್ ಶುದ್ಧ ಕುಡಿಯುವ ನೀರಿನ ಕ್ಯಾನ್ ವಿತರಣೆ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಕೇಂದ್ರ ಸ್ಥಾಪನೆ ಮೂಲ ಉದ್ದೇಶ ಸಫಲವಾಗುತ್ತಿದೆ ಎಂದರು.
ರಾಮಾಪುರ ಗ್ರಾಪಂ ಅಧ್ಯಕ್ಷ ಶರಣಪ್ಪ ಕಡಬಲಕಟ್ಟಿ ಮಾತನಾಡಿ, ಹಲವಾರು ವರ್ಷದಿಂದ ಕಾಯಿಲೆಗಳಿಗೆ ತುತ್ತಾಗಿದ್ದ ಜನತೆಗೆ ಶುದ್ಧ ಕುಡಿಯುವ ನೀರು ಘಟಕವನ್ನು ಶಾಸಕ ಜಿ.ಎಸ್. ಪಾಟೀಲರು ಜನಸೇವೆಗೆ ಸಮರ್ಪಿಸುವ ಮೂಲಕ ಗ್ರಾಮೀಣ ಜನತೆಯ ಕನಸು ನನಸಾಗಿಸಿದ್ದಾರೆ. ಗ್ರಾಮಸ್ಥರು ಯೋಜನೆ ಸದ್ವಿನಿಯೋಗ ಮಾಡಿಕೊಂಡು ಉತ್ತಮ ಆರೋಗ್ಯ ಹೊಂದಿ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement