ಶೌಚಾಲಯ ಕುರಿತ ಬೀದಿ ನಾಟಕ ಪ್ರದರ್ಶನ
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಶೌಚಾಲಯ ನಿರ್ಮಾಣ ಕುರಿತು ರೋಣ ತಾಲೂಕು ಕೊತಬಾಳದ ಅರುಣೋದಯ ಕಲಾ ತಂಡವರಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು. ಜಿಪಂ, ತಾಪಂ ಹಾಗೂ ಗ್ರಾಪಂ ಆಶ್ರಯದಲ್ಲಿ ಹಮ್ಮಿಕೊಂಡ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಜರುಗಿದ ಬೀದಿ ನಾಟಕವನ್ನು ತಾಪಂ ಸದಸ್ಯ ಪ್ರಹ್ಲಾದ ಹೊಸಳ್ಳಿ ಉದ್ಘಾಟಿಸಿದರು. ನಿರ್ಮಲ ಭಾರತ ಅಭಿಯಾನ ಜಿಪಂ ಸಮಾಲೋಚಕ ಕೃಷ್ಣಾ ದೊಡ್ಡಮನಿ ಮಾತನಾಡಿದರು. ಪಿಡಿಒ ಅಶ್ವಿನಿ ಕುರಡಗಿ, ಗ್ರಾಪಂ ಸದಸ್ಯ ಚನ್ನಪ್ಪ ಅಂಗಡಿ, ಮಲ್ಲಪ್ಪ ಹೊಸಳ್ಳಿ, ಮಾಬುಸಾಬ ಹರಿವಾಣ, ಶಿವಪ್ಪ ಗದಗಿನ, ತುಕಾರಾಮ ಹುಲಗಣ್ಣವರ, ಹನುಮಂತ ಹೊಂಬಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.