ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಫಲಾನುಭವಿಗಳ ಪ್ರತಿಭಟನೆ
ಮುಂಡರಗಿ: ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿ ಆಶ್ರಯ ಮನೆಗಳ ಹಕ್ಕು ಪತ್ರ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಡಂಬಳ ಗ್ರಾಮ ಪಂಚಾಯಿತಿ ಎದುರು ಫಲಾನುಭವಿಗಳು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ. 20 ವರ್ಷಗಳ ಹಿಂದೆ ರಾಜೀವ್ಗಾಂಧಿ ವಸತಿ ನಿಗಮದ ಮೂಲಕ ಡಂಬಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಡಂಬಳ ಗ್ರಾಮದಲ್ಲಿ ಆಶ್ರಯ ಮನೆ ನಿರ್ಮಾಣ ಮಾಡಿದ್ದು, ಮನೆ ಮಂಜೂರಾತಿ ಪಡೆದಿರುವವರು ಬಡವರು, ಕಾರ್ಮಿಕರು, ಮಹಿಳೆಯರಿದ್ದು, ಮನೆ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ. ತಕ್ಷಣ ಹಕ್ಕು ಪತ್ರ ವಿತರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಯುವ ಮುಖಂಡ ಪ್ರಭು ಹಣ್ಣಿ ಹೇಳಿದರು. ಅಪ್ಪಯ್ಯ ಹಿರೇಮಠ, ಮಂಜಯ್ಯ ಸ್ವಾಮಿ ಅರವಟಗಿಮಠ, ಅಪ್ಪಯ್ಯ ಹಿರೇಮಠ, ಮುತ್ತು ಹೂಗಾರ, ಮಂಜುನಾಥ ಪೂಜಾರ, ರುದ್ರಪ್ಪ, ಎಣಗಿ, ಹಾಗೂ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.