ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೊಯ್ಸಳರ ಕಾಲದ ಸಾಹಿತ್ಯಿಕ ಕೊಡುಗೆ: ಇಂದು ಉಪನ್ಯಾಸ

Rashmi Kasaragodu
Updated On : 12 Jan 2014, 1:48 am


ಗದಗ: ಜ. 12ರ ಬೆಳಗ್ಗೆ 11ರ ಭಾನುವಾರ ಸ್ಥಳೀಯ ಹೆಡ್ಪೋಸ್ಟ್ ಬಳಿ ಇರುವ ಎಕ್ಸ್ಸ್ಲಂಟ್ ಕೋಚಿಂಗ್ ಸೆಂಟರ್ನಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ, ಜಿಲ್ಲಾ ಘಟಕ ಗದಗ ಇವುಗಳ ಆಶ್ರಯದಲ್ಲಿ ಹೊಯ್ಸಳರ ಕಾಲದ ಸಾಹಿತ್ಯಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ನರೇಗಲ್ನ ಎಸ್ಎ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸಿ.ಜಿ. ಹಡೇದಗಡ್ಡಿ ಉಪನ್ಯಾಸ ನೀಡುವರು. ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೈ.ಆರ್. ಬೇಲೇರಿ, ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ರಾಜ್ಯ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಎಂ. ಗರಗ ಹಾಗೂ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ವಿ.ಕೆ. ದ್ಯಾಮನಗೌಡರ, ಜಿಲ್ಲಾ ಸಂಚಾಲಕಿ ಶಂಕುಂತಲಾ ಸಿಂಧೂರ, ಎಕ್ಸ್ಲಂಟ್ ಕೋಚಿಂಗ್ ಸೆಂಟರ್ನ ಆಡಳಿತಾಧಿಕಾರಿ ಕೆ.ಟಿ. ವಡ್ಡೀನ ಉಪಸ್ಥಿತರಿರುವರು. ಜಿಲ್ಲಾ ಘಟಕದ ಸದಸ್ಯರು, ಇತಿಹಾಸ ಉಪನ್ಯಾಸಕರು, ಆಸಕ್ತರು ಆಗಮಿಸಲು ಪ್ರಧಾನ ಕಾರ್ಯದರ್ಶಿ ದತ್ತಪ್ರಸನ್ನ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement