18ರಂದು ಸ್ವರನಮನ ಸಮಾರಂಭ
ರೋಣ: ಪಟ್ಟಣದ ಗುಲಗಂಜಿಮಠದಲ್ಲಿ ಜ. 18ರ ಬೆಳಗ್ಗೆ 10 ಗಂಟೆಗೆ ಭಾರತ ರತ್ನ ಪಂ.ಡಾ. ಭೀಮಸೇನ ಜೋಶಿ ಸ್ಮರಣೋತ್ಸವ ಟ್ರಸ್ಟ್ ಕಮಿಟಿಯಿಂದ ಸಂಗೀತ ಸ್ವರ ನಮನ ಸಮಾರಂಭವು ಪಂ. ಭೀಮಸೇನ ಜೋಶಿಯವರ 3 ನೇ ಪುಣ್ಯಸ್ಮರಣೆ ನಿಮಿತ್ತ ಜರುಗಲಿದೆ. ತಾಲೂಕಿನ ಸಂಗೀತ ಅಭಿಲಾಷಿಗಳು ಹಾಗೂ ಜೋಶಿಯವರ ಅಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಸಂಘಟಕರು ಕೋರಿದ್ದಾರೆ.
ಇಂದು ಶಿಬಿರ
ಗದಗ: ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ನಗರದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಜ. 13ರ ಸಂಜೆ 4 ಗಂಟೆಗೆ ಗ್ರಾಮದ ಪ್ರಗತಿಯಲ್ಲಿ ಯುವಕರು ಕುರಿತು ಉಪನ್ಯಾಸ ಜರುಗಲಿದೆ. ವಸಂತಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಎ.ಎಸ್. ಮಕಾಂದರ, ಬಸವರಾಜ ಕುಕನೂರ, ಬಸವರಾಜ ಬಳ್ಳಾರ, ಕೆ.ಜಿ. ಕಟ್ಟಿಮನಿ, ಶಾಂತವ್ವ ವಡ್ಡರ, ಎನ್.ಎಸ್. ಕಿಂದ್ರಿ ಭಾಗವಹಿಸುವರು. ನಂತರ ಗದಗ-ಬೆಟಗೇರಿಯ ಸೃಷ್ಟಿ ಕಲಾ ತಂಡದಿಂದ ಜಾನಪದ ಕಾರ್ಯಕ್ರಮ ಜರುಗಲಿದೆ.
ನಾಳೆ ಸದಸ್ಯತ್ವ ಅಭಿಯಾನ
ಗದಗ: ಹಜರತ ಮಹ್ಮದ ಪೈಗಂಬರ್ ಅವರ 1445ನೇ ಜಯಂತ್ಯುತ್ಸವ ಜ. 14ರ ಬೆಳಗ್ಗೆ 10 ಗಂಟೆಗೆ ಮಹೇಂದ್ರಕರ ವೃತ್ತದ ಬಳಿಯ ರಾಜ್ಯ ಮುಸ್ಲಿಂ ಜಾಗ್ರತ ವೇದಿಕೆ ವತಿಯಿಂದ ಪ್ರಧಾನ ಕಾರ್ಯಾಲಯದ ಹತ್ತಿರ ಆಚರಿಸಲಾಗುವುದು. ಇದೇ ಸಂದರ್ಭದಲ್ಲಿ ರಾಜ್ಯ ಮುಸ್ಲಿಂ ಜಾಗೃತ ವೇದಿಕೆ ವತಿಯಿಂದ ಗದಗ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ವೇದಿಕೆಯ ರಾಜ್ಯಾಧ್ಯಕ್ಷ ಫರೀದ ಸುಂಕದ ಅಧ್ಯಕ್ಷತೆ ವಹಿಸುವರು. ಮೌಲಾನ ಇನಾಯತವುಲ್ಲಾ ನೇತೃತ್ವ ವಹಿಸುವರು. ಅತಿಥಿಗಳಾಗಿ ನಗರಸಭೆ ಸದಸ್ಯ ಪೀರಸಾಬ ಕೌತಾಳ, ಎಂ.ಸಿ. ಶೇಖ, ಖಮರುಲ್ ಸುಲ್ತಾನ್ ನಮಾಜಿ, ಮಹ್ಮದಶಫಿ ಕುದರಿ, ಬರಕತ್‌ಅಲಿ ಮುಲ್ಲಾ, ಎಸ್.ಕೆ. ನದಾಫ, ಜೀವನಸಾಬ್ ನಮಾಜಿ, ಎಚ್.ಕೆ. ಮುಲ್ಲಾ, ಉಮರಸಾಬ್ ಅಣ್ಣಿಗೇರಿ, ಖುರ್ಷಿದ ಅಹ್ಮದ್ ಡಾಲಾಯತ, ಮುನ್ನಾ ಮುಲ್ಲಾ, ಶಿವಬಸವ ಜನಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ, ಎಂ.ಬಿ. ನದಾಫ, ಯೂಸೂಫ ಡಂಬಳ, ಮಕ್ತುಂಹುಸೇನ ಜೋರಂ ಮುಂತಾದವರು ಆಗಮಿಸುವರು. ವೇದಿಕೆಯ ಪದಾಧಿಕಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಕೊಪ್ಪಳ, ರಾಜ್ಯ ಖಜಾಂಚಿ ಸಿರಾಜಅಹ್ಮದ ಖಾಜಿ, ಗದಗ ಜಿಲ್ಲಾ ಉಸ್ತುವಾರಿ ಜಾವೇದ ಸುಂಕದ, ರಾಜ್ಯ ಸಂಘಟನಾ ಕಾರ್ಯದರ್ಶಿ ನಿಸಾರಅಹ್ಮದ್ ಖಾಜಿ, ಖಾಜಾ ಅಮೀನಹುದ್ದಿನ, ನೂರಅಹ್ಮದ, ಮೀರನಸಾಬ್, ಬಾಬಾಜಾನಸಾಬ, ಮರ್ತುಜಾ, ಇಂತಿಯಾಜ ಖಾನ್, ಯುವ ಘಟಕದ ಅಧ್ಯಕ್ಷ ಶಾಹಿದ ಸುಂಕದ, ಅಶ್ಪಾಕ ಪಾಟೀಲ, ಇಬ್ರಾಹಿಂ ಕಾಗದಗಾರ, ಜಬಿವುಲ್ಲಾ ಮುಂಡರಗಿ ಮುಂತಾದವರು ಉಪಸ್ಥಿತರಿರುವರು.