ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೂಲ ಜನಪದ ಕಲೆ ರಕ್ಷಿಸಿ

Lingaraj Badiger
Updated On : 13 Jan 2014, 12:43 pm

ಕನ್ನಡಪ್ರಭ ವಾರ್ತೆ, ರೋಣ, ಜ. 12
ಪಾಶ್ಚಿಮಾತ್ಯ ಪ್ರಭಾವಕ್ಕೆ ಒಳಗಾಗಿ ಜೀವಂತವಿರುವ ಜಾನಪದ ಕಲೆಯನ್ನು ನಾವಿಂದು ಮರೆಯುತ್ತಿರುವುದು ವಿಷಾದನೀಯ. ಗ್ರಾಮೀಣ ಸೊಗಡಾದ ಮೂಲ ಜನಪದ ಕಲೆಯನ್ನು ರಕ್ಷಿಸುವವಲ್ಲಿ ಯುವ ಜನತೆ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈಚೆಗೆ ಪಟ್ಟಣದ ಹೊಸ ಸಂತೆ ಬಜಾರ್ ಜಾಗೆಯಲ್ಲಿ ಜಿಪಂ, ತಾಪಂ, ಪುರಸಭೆ ರೋಣ ಮತ್ತು ಆಝಾದ್ ರೋಣದ ಯುವಕ ಸಂಘದ ಆಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ಯುವಜನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಿಥುನ ಪಾಟೀಲ ಮಾತನಾಡಿ, ದೊಡ್ಡಾಟ, ಲಾವಣಿಪದ, ಗೀ ಗೀ ಪದ, ಡೊಳ್ಳಿನ ಪದ, ಸೋಭಾನ ಪದ, ಕೋಲಾಟ, ಹಂತಿ ಪದ, ಭಾವಗೀತೆ, ವೀರಗಾಸೆ, ಜಾನಪದ ನೃತ್ಯ, ಜೋಗುಳ, ರಾಗಿ ಬೀಸುವ ಪದ, ಯಕ್ಷಗಾನ ಸೇರಿದಂತೆ ಮುಂತಾದವುಗಳು ಜನಪದ ಸಾಲಿನಲ್ಲಿ ಬರುತ್ತಿವೆ. ನಮ್ಮ ಪೂರ್ವಿಕರು ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು. ವಿಪರ್ಯಾಸವೆಂದರೆ ಇಂದು ಜನಪದ ಕಲೆಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಆದ್ದರಿಂದ ಯುವ ಪೀಳಿಗೆ ಮೂಲ ಜನಪದ ಉಳುವಿಗೆ ಶ್ರಮಿಸಬೇಕು ಎಂದರು.
ಹಾಸ್ಯ ಕಲಾವಿದ ಬಸವರಾಜ ಪಾಗದ ಮಾತನಾಡಿದರು. ಕೊತಬಾಳ ಶಾಲೆ ಶಿಕ್ಷಕ ಎಚ್.ಎಸ್. ಅಂಬಿಗೇರ ಅವರಿಂದ ಪವಾಡ ಬಯಲು ಕಾರ್ಯಕ್ರಮ ಜರುಗಿತು. ಮಾರನಬಸರಿ ಶಾಲಾ ಮಕ್ಕಳಿಂದ ಜರುಗಿದ ಕಂಸಾಳೆ ನೃತ್ಯ ಸಭೀಕರ ಮನ ಸೂರೆಗೊಂಡಿತು. ಉದ್ಘಾಟನೆಯ ಬಳಿಕ ಜನಪದ ಮೇಳ ಸ್ಪರ್ಧೆಗಳು ಜರುಗಿದವು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ತಾಪಂ ಉಪಾಧ್ಯಕ್ಷೆ ಶೈಲಜಾ ಯರಗೇರಿ, ಸಿ.ಕೆ. ಸುಂಕದ, ಬಾವಾಸಾಬ ಬೆಟಗೇರಿ, ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ, ನಾಜಬೇಗಂ ಯಲಿಗಾರ, ವಿಜಯಲಕ್ಷ್ಮೀ ಗಡಗಿ, ಬಾಬುಸಾಬ ಚಿನ್ನೂರ, ಖಾದರಸಾಬ ಸಂಕನೂರ, ಯಮನವ್ವ ಜಮ್ಮನಕಟ್ಟಿ, ಶರಣಪ್ಪ ದೊಡ್ಡಮನಿ, ತಾಪಂ ಸದಸ್ಯೆ ರೇಣುಕಾ ಹಟ್ಟಿಮನಿ, ವಿ.ಬಿ. ಸೋಮನಕಟ್ಟಿಮಠ, ಶಂಕರಗೌಡ ಪಾಟೀಲ, ಎಸ್.ಆರ್. ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು. ಶಫೀಕ್ ಮೂಗನೂರ ಸ್ವಾಗತಿಸಿದರು. ಅಜೀಜ್ ಯಲಿಗಾರ ನಿರೂಪಿಸಿದರು. ಗೌಸು ಪೀರಣ್ಣವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement