ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಷ್ಟ್ರೀಯತೆ ಭಾವನೆ ಅವಶ್ಯಕ

Lingaraj Badiger
Updated On : 13 Jan 2014, 12:43 pm

ಕನ್ನಡಪ್ರಭ ವಾರ್ತೆ, ಗದಗ, ಜ. 12
ಭಾರತ ಸಮೃದ್ಧತೆಗೆ ಪ್ರತಿಯೊಬ್ಬರಲ್ಲೂ ರಾಷ್ಟ್ರೀಯತೆಯ ಭಾವನೆಗಳು ಬೆಳೆಯಬೇಕೆಂದು ಚಂದ್ರಶೇಖರ ಶ್ರೀಗಳು ಹೇಳಿದರು.
ಈಚೆಗೆ ಅವರು ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಗದಗನ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಎನ್‌ಎಸ್‌ಎಸ್ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ರಾಷ್ಟ್ರೀಯತೆಯ ಹಾಗೂ ಏಕತೆ ಸಾರುವ ತತ್ವಾದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಬಿ.ಬಿ. ಗೌಡರ ಮಾತನಾಡಿ, ಎಸ್‌ಎಸ್‌ಎಸ್ ಶಿಬಿರಗಳೆಂದರೆ ಕೇವಲ ಜನರನ್ನು ರಂಜಿಸಲು ಹಾಗೂ ಗ್ರಾಮಗಳನ್ನು ಸ್ವಚ್ಛಗೊಳಿಸುವುದಕ್ಕೆ ಸೀಮಿತವಾಗಿರದೆ ರಂಜನೆಗಿಂತ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವ ಮಾದರಿ ಆದರ್ಶ ಹೊಂದಿವೆ. ಇಂತಹ ಶಿಬಿರಗಳ ಮೂಲಕ ಶಿಬಿರಾರ್ಥಿಗಳು ಗ್ರಾಮಗಳ ಸೌಹಾರ್ದಯುತ ಸಂಸ್ಕೃತಿ ಅರಿತುಕೊಳ್ಳಲು ಹಾಗೂ ಶ್ರಮದ ಗೌರವ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೆ.ಆರ್. ಕೋರಿ ಮಾತನಾಡಿ, ಎನ್‌ಎಸ್‌ಎಸ್ ಉದ್ದೇಶವು ಸೇವೆ, ಸಂಘಟನೆ ಹಾಗೂ ಅರಿವು ಮೂಡಿಸುವುದಾಗಿದೆ ಎಂದರು.
ತಾಪಂ ಸದಸ್ಯೆ ಹನುಮವ್ವ ಛಟ್ರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಹಾಲವ್ವ ಸತ್ಯನಗೌಡ್ರ, ಸದಸ್ಯ ಶಿವಾನಂದಪ್ಪ ಯಾಳವಾಡ ಮುಂತಾದವರು ಇದ್ದರು. ಐಶ್ವರ್ಯ ಅಗಸಿಮನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕೆ.ವಿ. ಬಾಗಲಕೋಟಿ ಸ್ವಾಗತಿಸಿದರು. ವೈ.ಎಸ್. ಮತ್ತೂರ ನಿರೂಪಿಸಿದರು. ರಾಜಶೇಖರ ಚಿಂಚಖಂಡಿಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement