ಉತ್ತಮ ಆರೋಗ್ಯಕ್ಕೆ ಡ್ಯಾನ್ಸ್ ಸಹಕಾರಿ: ರಾಧಿಕಾ
ಗದಗ: ಡ್ಯಾನ್ಸ್‌ನಿಂದ ಮಾನವನ ದೇಹಕ್ಕೆ ವ್ಯಾಯಾಮವಾಗುವುದರಿಂದ ಮನುಷ್ಯನು ಆರೋಗ್ಯವಾಗಿರಲು ಸಹಕಾರಿಯಾಗಲಿದ್ದು, ಉತ್ತಮ ಆರೋಗ್ಯಕ್ಕೆ ಡ್ಯಾನ್ಸ್ ಸಹಕಾರಿ ಎಂದು ಡಾ. ರಾಧಿಕಾ ಕುಲಕರ್ಣಿ ಹೇಳಿದರು.
ಅವರು ಈಚೆಗೆ ನಗರದ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬ್ಲ್ಯಾಕ್ ಶಾಡೋಜ್ ಮತ್ತು ಗ್ಲೋಬಲ್ ಡಾನ್ಸ್ ಅಕಾಡೆಮಿ ಸಹಭಾಗಿತ್ವದಲ್ಲಿ ಜರುಗಿದ ಡಾನ್ಸ್ ಗದಗ ಡಾನ್ಸ್‌ನ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ನೃತ್ಯ ಪ್ರತಿಯೊಬ್ಬನನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಕಾರಣ ಪ್ರತಿಯೊಬ್ಬರೂ ನೃತ್ಯದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ಉತ್ತಮವಾಗಿಟ್ಟುಕೊಳ್ಳುವ ಮೂಲಕ ತಮ್ಮಲ್ಲಿ ಅಡಕವಾಗಿರುವ ಪ್ರತಿಭೆ ಹೊರಹಾಕಲು ಶ್ರಮಿಸಿ ಎಂದರು. ಆದರ್ಶ ಶಿಕ್ಷಣ ಸಮಿತಿ ಕಾರ್ಯದರ್ಶಿ ಪಿ.ಆರ್. ಅಡವಿ ಮಾತನಾಡಿ, ಡ್ಯಾನ್ಸ್ ಗದಗ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನೃತ್ಯಪಟುಗಳು ವಿಜೇತರಾಗಿ ರಾಷ್ಟ್ರಮಟ್ಟದಲ್ಲಿ ಮಿಂಚಲಿ ಎಂದು ಶುಭ ಹಾರೈಸಿದರು. ಗದಗ-ಬೆಟಗೇರಿ ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ, ಎಸ್.ಟಿ. ಹಿರೇಮಠ ಮೆಮೋರಿಯಲ್ ಟ್ರಸ್ಟನ ಕಾರ್ಯದರ್ಶಿ ವಿಜಯಕುಮಾರ ಹಿರೇಮಠ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ, ಎಸ್.ವಿ.ಟಿ ಫೌಂಡೇಷನ್‌ನ ಕಾರ್ಯದರ್ಶಿ ಡಾ. ಸಂತೋಷ ತೋಟಗಂಟಿಮಠ, ಕಾರ್ಯಕ್ರಮದ ಸಂಯೋಜಕ ವೆಂಕಟೇಶ ಆಕಳವಾಡಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಮುಳಗುಂದ, ಫಯಾಜ್ ಕುರಹಟ್ಟಿ, ಪ್ರಭು ಪಾಟೀಲ, ಸುಮಂತ ಎಂ, ಬೆಳ್ಳಿಕಟ್ಟಿ, ಡಾ. ರಕ್ಕಸಗಿ, ವಿಜಯಕುಮಾರ ಬೆಳಗಲಿ, ಗೋಪಿ, ಸಿ.ಎಂ. ಪಾಟೀಲ ಇದ್ದರು. ಬಿ.ಪಿ. ಜೈನರ್ ಹಾಗೂ ಮಂಜರಿ ಹೊಂಬಾಳಿ ನಿರೂಪಿಸಿದರು.