ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಸ್‌ಸಿ-ಎಸ್‌ಟಿ ಕಾಲನಿ ಅಭಿವೃದ್ಧಿಗೆ ಆದ್ಯತೆ

Mainashree
Updated On : 15 Jan 2014, 11:24 am

ರೋಣ: ಕ್ಷೇತ್ರಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲನಿಗಳ ಜನತೆಗೆ ವ್ಯವಸ್ಥಿತ ರಸ್ತೆ, ನೀರು, ವಿದ್ಯುತ್, ಗಟಾರ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈಚೆಗೆ ತಾಲೂಕಿನ ಜಕ್ಕಲಿ, ಹೊನ್ನಿಗನೂರ, ಕಲ್ಲಿಗನೂರ, ಲಕ್ಕಲಕಟ್ಟಿ ಗ್ರಾಮಗಳ ಎಸ್‌ಸಿ-ಎಸ್‌ಟಿ ಕಾಲನಿಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಜಕ್ಕಲಿ ಗ್ರಾಮದ ಎಸ್‌ಟಿ ಕಾಲನಿ ರಸ್ತೆಯನ್ನು ರು. 25 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ರೋಣದಿಂದ ಜಕ್ಕಲಿ ಮಾರ್ಗವಾಗಿ ನರೇಗಲ್ ವರೆಗಿನ ರಸ್ತೆಯನ್ನು ರು. 5 ಕೋಟಿ ವೆಚ್ಚದಲ್ಲಿ, ಜಕ್ಕಲಿಯಿಂದ ಮಾರನಬಸರಿ ವರೆಗಿನ ರಸ್ತೆಯನ್ನು ರು. 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಈಗಾಗಲೇ ಮಂಜೂರಾತಿ ದೊರೆತಿದೆ. ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು. ಗ್ರಾಮದಲ್ಲಿನ ಎ.ಜಿ. ದೊಡ್ಡಮೇಟಿ ಪ್ರೌಢಶಾಲೆಯ 3 ಕೊಠಡಿಗಳಿಗೆ ರು. 18 ಲಕ್ಷ ಹಾಗೂ ಶಾಲಾ ಕಾಂಪೌಂಡ್‌ನ್ನು ರು. 4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ವಿವಿಧ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ತಾಪಂ ಮಾಜಿ ಸದಸ್ಯ ಸುಭಾಸ ಕೆಲಗಡೆ, ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಮೇಟಿ, ಮುತ್ತಪ್ಪ ಮರಬಸಪ್ಪನವರ, ಬಾಬಣ್ಣ ಅರಹುಣಸಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಸದಸ್ಯೆ ಮಾಲಾಬೀ ಗಡಾದ, ವಿ.ಆರ್. ಗುಡಿಸಾಗರ, ಗ್ರಾಪಂ ಸದಸ್ಯೆ ಪ್ರೇಮಾ ಗಾಣಿಗೇರ, ಅನ್ನಕ್ಕ ರೋಣದ, ಅಂದಪ್ಪ ಮಾದರ, ಎಂಜಿನಿಯರ್ ರಮೇಶ ಪತ್ತಾರ, ಶೇಖಪ್ಪ ಮೇಟಿ, ರವಿ ಮುಗಳಿ, ದಾವಲಬೀ ಜಿಡ್ಡಿಮನಿ ಉಪಸ್ಥಿತರಿದ್ದರು. ರವಿ ಬೂದಿಹಾಳ ನಿರೂಪಿಸಿದರು. ಗ್ರಾಪಂ ಸದಸ್ಯ ಶಿವರಾಜ ಮುಗಳಿ ಸ್ವಾಗತಿಸಿದರು. ಬಂದು ಗಡಾದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement