ಪ್ರತಿ ಮಗುವಿಗೂ ಉನ್ನತ ಶಿಕ್ಷಣ ಸರ್ಕಾರದ ಗುರಿ
ನರೇಗಲ್ಲ: ರಾಜ್ಯದಲ್ಲಿರುವ ಪ್ರತಿ ಮಗುವಿಗೂ ಉನ್ನತ ಶಿಕ್ಷಣ ನೀಡುವುದೇ ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈಚೆಗೆ ಸ್ಥಳೀಯ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನೂತನ ಹೆಚ್ಚುವರಿ ಕೊಠಡಿ ಹಾಗೂ ಪ್ರಯೋಗಾಲಯ ಕಟ್ಟಡಗಳ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಚಾರ್ಯ ಹನುಮಗೌಡ ಸಿ. ಹಾಗೂ ಸ್ಥಳೀಯ ಮುಖಂಡ ಅಂದಾನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ.ಪಂ. ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ, ಉಪಾಧ್ಯಕ್ಷೆ ಅನ್ನಪೂರ್ಣಾ ಗಿಂಡಿ, ಭೂದಾನಿ ಹನುಮಂತಪ್ಪ ಕಳಕೊಣ್ಣವರ, ರಮೇಶ ಕಳಕೊಣ್ಣವರ, ಸದಸ್ಯರು, ವಿ.ಆರ್. ಗುಡಿಸಾಗರ, ಐ.ಆರ್. ಲಗಳೂರ, ಕೆ.ಎನ್. ಕಟ್ಟಿಮನಿ, ವಿ.ಕೆ. ಸಂಗನಾಳ, ಬಾಲಕೃಷ್ಣ ಉಪಾಧ್ಯ, ಬಿ.ಎಸ್. ಪರಣ್ಣವರ, ಎಸ್.ಬಿ. ಚನ್ನಪ್ಪನವರ, ಸಿ.ವಿ. ವಂಕಲಕುಂಟಿ, ಲತಾ ಕಿಲ್ಲೇದಾರ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಲಗಳೂರ ನಿರೂಪಿಸಿ, ವಂದಿಸಿದರು.