ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಿಂದೂ-ಮುಸ್ಲಿಂ ಬಾಂಧವರಿಂದ ಆಚರಣೆ

Mainashree
Updated On : 15 Jan 2014, 11:23 am

ಮುಂಡರಗಿ: ಮುಂಡರಗಿ ತಾಲೂಕು ಕೋಮು ಸೌಹಾರ್ದತೆಗೆ ಹೆಸರಾದ ತಾಲೂಕು. ಇಲ್ಲಿ ಎಲ್ಲ ಜಾತಿ, ಜನಾಂಗದವರು ಸೇರಿ ಹಬ್ಬ ಆಚರಿಸುತ್ತಾರೆ. ಮಂಗಳವಾರ ಈದಮಿಲಾದ್ ಹಬ್ಬದ ಜತೆಗೆ ಸಂಕ್ರಾಂತಿಯ ಎಳ್ಳು ಬೆಲ್ಲವನ್ನು ವಿನಿಮಯಮಾಡಿಕೊಂಡು ಹಿಂದೂ-ಮುಸ್ಲಿಂ ಬಾಂಧವರು ಸೇರಿ ಆಚರಣೆ ಮಾಡಿದ್ದು ವಿಶೇಷವಾಗಿತ್ತು.
ಇಲ್ಲಿನ ಹೇಮರಡ್ಡಿ ಮಲ್ಲಮ್ಮ ವೃತ್ತದ ಹಾಗೂ ಬೃಂದಾವನ ವೃತ್ತದಲ್ಲಿ ಗೆಳೆಯರು ಹಾಗೂ ಹಾಗೂ ವಿವಿಧ ಸಂಘಟನೆಗಳ ಎಲ್ಲ ಹಿರಿಯರು, ಸ್ನೇಹಿತರೂ ಸೇರಿಕೊಂಡು ಮಂಗಳವಾರ ಮುಸ್ಲಿಂ ಸಮಾಜ ಬಾಂಧವರು ಈದಮಿಲಾದ್ ಹಬ್ಬದ ಅಂಗವಾಗಿ ಮೆರವಣಿಗೆ ಹೊರಟ ಸಂದರ್ಭದಲ್ಲಿ ಅವರೆಲ್ಲರೂ ಧಾರವಾಡ ಪೇಡಾ ಹಾಗೂ ಎಳ್ಳು-ಬೆಲ್ಲ, ಕುಸರೆಳ್ಳು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ವಿ.ಎಲ್. ನಾಡಗೌಡ್ರ, ವೈ.ಎನ್. ಗೌಡರ ಮುಂತಾದವರು ಮಾತನಾಡಿದರು. ಶಾಸಕ ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ಅಂದಪ್ಪ ಬೆಲ್ಲದ, ನಾರಾಯಣಪ್ಪ ಇಲ್ಲೂರ, ಹೇಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ರವೀಂದ್ರ ಉಪ್ಪಿನಬೆಟಗೇರಿ, ಧ್ರುವಕುಮಾರ ಹೊಸಮನಿ, ಆನಂದ ರಾಮೇನಹಳ್ಳಿ, ಪಾಲಾಕ್ಷಿ ಗಣದಿಣ್ಣಿ, ಬಸವರಾಜ ರಾಮೇನಹಳ್ಳಿ, ಶಿವಾನಂದ ಬಾರಕೇರ, ಮಂಜುನಾಥ ಕಾಗನೂರ, ಎ.ಪಿ. ದಂಡೀನ, ಡಿ.ಡಿ. ಮೋರನಾಳ, ಪ್ರಶಾಂತ ಪಾಟೀಲ, ಸಿದ್ದಪ್ಪ ಮ್ಯಾಗೇರಿ, ಲಿಂಗರಾಜಗೌಡ ಪಾಟೀಲ, ಎಸ್.ಡಿ. ಮಕಾಂದಾರ, ರಾಮು ಕಲಾಲ್, ರಾಮಣ್ಣ ಬಳ್ಳಾರಿ, ಆರ್.ಎಂ. ತಪ್ಪಡಿ, ಸೊಲಬಣ್ಣ ಜೋಬಾಳಿ, ಅಬ್ದುಲ್ ಖುರೇಶಿ, ನಬೀಸಾಬ್ ಕೆಲೂರ, ರಾಮಚಂದ್ರ ಗಾರವಾಡ, ಬಸವರಾಜ ನವಲಗುಂದ, ಪಕ್ರುದ್ದೀನ್ ಹಾರೋಗೇರಿ, ಅಲ್ಲಾಭಕ್ಷಿ ಅಳವಂಡಿ, ಅಲ್ಲಾಭಕ್ಷಿ ಬೆಟಗೇರಿ, ಸುರೇಶ ಮಾಗಡಿ, ಅಲ್ಲಾಭಕ್ಷಿ ಬನ್ನಿಗೋಳ ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement