ಆಸ್ತಿಗಾಗಿ ಘರ್ಷಣೆ: ಹಲವರಿಗೆ ಗಂಭೀರ ಗಾಯ
ಗದಗ: ಆಸ್ತಿಗಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆಯಾಗಿ ಹಲವರು ಗಾಯಗೊಂಡಿರುವ ಘಟನೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಬುಧವಾರ ಜರುಗಿದೆ.
ಮಾಜಿ ಯೋಧ ಶಂಕರಪ್ಪ ಹಾಗೂ ಬಸವಣ್ಣೆಪ್ಪ ಕುಟುಂಬಗಳ ಮಧ್ಯೆ 30 ವರ್ಷಗಳಿಂದ ಆಸ್ತಿಗಾಗಿ ಇದ್ದ ಕಲಹ ವಿಕೋಪಕ್ಕೆ ಹೋಗಿ ಮಾರಕಾಸ್ತ್ರಗಳಿಂದ ಬಡಿದಾಡಿದ್ದಾರೆ. ಎರಡೂ ಕುಟುಂಬದ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಲಾಗಿದೆ.
ಕಳೆದ 4, 5 ದಿನಗಳಿಂದ ಎರಡೂ ಕುಟುಂಬದವರ ಮಧ್ಯೆ ಗಲಾಟೆ ಆಗುತ್ತಿದ್ದ ಬಗ್ಗೆ ಗ್ರಾಮೀಣ ಪೊಲೀಸರಿಗೆ ತಿಳಿಸಿದರೂ ಕ್ರಮ ಕೈಗೊಂಡಿರಲಿಲ್ಲ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.