ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ
ಮುಂಡರಗಿ: ತಾಲೂಕಿನ ವಿವಿಧ ಭಾಗಗಳಲ್ಲಿ ಈಗಾಗಲೇ ಇರುವಂತಹ ಡಾಂಬರ್ ರಸ್ತೆಗಳು ಅಲ್ಲಲ್ಲಿ ಹಾಳಾಗಿದ್ದು, ಅಂತಹ ರಸ್ತೆಗಳನ್ನು ಗುರುತಿಸಿ ಸಿಎಂಜಿಎಸ್ವೈ ಯೋಜನೆಯಡಿ ಮರುಡಾಂಬರೀಕರಣ ಮಾಡಲಾಗುತ್ತಿದೆ. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು. ಅವರು ಗುರುವಾರ ತಾಲೂಕಿನ ಗಂಗಾಪುರ ಹತ್ತಿರದ ಎಂಜಿಎಸ್ವೈ ಯೋಜನೆಯಡಿ ರು. 12 ಲಕ್ಷ ವೆಚ್ಚದ ಕಲಕೇರಿ-ಗಂಗಾಪುರ ರಸ್ತೆ ಮರುಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರಕ್ಕೆ ಮುಂಡರಗಿ ತಾಲೂಕು ಹಾಗೂ ಶಿರಹಟ್ಟಿ ತಾಲೂಕು ಮತ್ತು ಲಕ್ಷ್ಮೇಶ್ವರ ಭಾಗದ ಗ್ರಾಮಗಳು ಒಳಪಡುತ್ತವೆ. ಈ ಎಲ್ಲ ಭಾಗಗಳಲ್ಲಿಯೂ ಅನೇಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿಗೆ ಒತ್ತು ನೀಡುವುದಾಗಿ ತಿಳಿಸಿದರು.
ಹೇಮಂತಗೌಡ ಪಾಟೀಲ್, ಧ್ರುವಕುಮಾರ ಹೊಸಮನಿ, ಗುತ್ತಿಗೆದಾರ ಡಿ.ಡಿ. ಮೋರನಾಳ, ಶೇಖರಾಜ ಹೊಸಮನಿ, ಸೊಲಬಣ್ಣ ಜೋಬಾಳಿ, ರಾಮಣ್ಣ ಬಳ್ಳಾರಿ, ಲಿಂಗರಾಜಗೌಡ ಪಾಟೀಲ್, ಎ.ಪಿ. ದಂಡಿನ, ಸುರೇಶ ಮಾಗಡಿ, ಕಾರೆಪ್ಪಹಳ್ಳಿ, ಕೊಟ್ರಪ್ಪ ಸೂಲಿ, ನಿಂಗಪ್ಪ ತಿಪ್ಪಾಪುರ, ಬಸವಣ್ಣಪ್ಪ ಬಂಡಿ, ಹನುಮಪ್ಪ ಚೌಟ್ನವರ, ಲೋಕೋಪಯೋಗಿ ಇಲಾಖೆ ಎಇ ಮಲ್ಲಿಕಾರ್ಜುನ ಹಿರೇಮನಿ, ಎಚ್. ಬಸವರಾಜ ಉಪಸ್ಥಿತರಿದ್ದರು.