ಪಟೇಲರ ಮೂರ್ತಿ ನಿರ್ಮಾಣಕ್ಕೆ ಸಹಕರಿಸಿ
ನರಗುಂದ: ಜಗತ್ತಿನಲ್ಲಿ ಅತಿ ಎತ್ತರದ ವಲ್ಲಭಭಾಯಿ ಪಟೇಲರ ಲೋಹದ ಮೂರ್ತಿಯನ್ನು ದೇಶದಲ್ಲಿ ನಿರ್ಮಾಣ ಮಾಡುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಅವರು ಗುರುವಾರ ತಾಲೂಕಿನ ಹುಣಸೀಕಟ್ಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೀಲರ ಭಾವಚಿತ್ರ ಮೆರವಣಿಗೆ ಜರುಗಿಸಿ ನಂತರ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಲೋಹ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಗುಜರಾತಿನ ಸರ್ದಾರ ವಲ್ಲಭಭಾಯಿ ಸರೋವರದಲ್ಲಿ ಈ ದೇಶದ ಏಕತೆಗೆ ಶ್ರಮಿಸಿದ ವಲ್ಲಭಭಾಯಿ ಪಟೀಲರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಅದಕ್ಕೆ ದೇಶದ ಪ್ರತಿಯೊಬ್ಬ ವ್ಯಕ್ತಿಯಿಂದ ಲೋಹ ಸಂಗ್ರಹ ಮಾಡಿ ಮೂರ್ತಿ ನಿರ್ಮಾಣ ಮಾಡಬೇಕೆಂದು ಈ ಕಾರ್ಯಕ್ರಮಕ್ಕೆ ಹಮ್ಮಿಕೊಂಡಿದ್ದಾರೆ. ಇಂತಹ ಕಾರ್ಯಕ್ರಮವು ನರಗುಂದ ತಾಲೂಕಿನಿಂದ ಪ್ರಾರಂಭೋತ್ಸವ ಹಮ್ಮಿಕೊಂಡ ಎಲ್ಲ ಲೋಹಸಂಗ್ರಹದ ಪದಾಧಿಕಾರಿಗಳಿಗೆ ಕ್ಷೇತ್ರದ ಜನತೆ ಪರವಾಗಿ ಧನ್ಯವಾದ ತಿಳಿಸಿದರು. ಗ್ರಾಪಂ ಮಟ್ಟದಲ್ಲಿ ಸಂಗ್ರಹವಾದ ಲೋಹಗಳನ್ನು ಗ್ರಾಪಂ ಸದಸ್ಯರು ಜಿಲ್ಲಾ ಲೋಹ ಸಂಗ್ರಹದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಜಿಲ್ಲಾ ಲೋಹ ಸಂಗ್ರಹ ಸಮಿತಿ ಸಂಚಾಲಕ ಮೋಹನ ಮಾಳಶಟ್ಟಿ, ಆರ್.ಬಿ. ಚಿನವಾಲರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕಳಕಪ್ಪ ಬಂಡಿ, ಜಿಪಂ ಸದಸ್ಯ ಎಂ.ಎಸ್. ಪಾಟೀಲ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಎಂ.ಎಸ್. ಕರಿಗೌಡರ, ಎಫ್.ಆರ್. ಪಾಟೀಲ, ಎಸ್.ಬಿ. ಕರಿಗೌಡರ, ಅಜ್ಜಪ್ಪ ಹುಡೇದ, ಬಿ.ಬಿ. ಐನಾಪುರ, ಬಸನಗೌಡ ಹುಡೇದಮನಿ, ಚಂದ್ರು ದಂಡಿನ, ಬಿ.ಎಸ್. ಪಾಟೀಲ, ಮಲ್ಲಪ್ಪ ಮೇಟಿ, ಗೋವಿಂದರಡ್ಡಿ ಸಿದ್ನಾಳ, ಅನಿಲ ಧರಯಣ್ಣವರ, ಉಮೇಶ ಕುಡನ್ನವರ, ಚಂದ್ರು ಪವಾರ, ಪ್ರಕಾಶ ಪಟ್ಟಣಶೆಟ್ಟಿ, ವಿ.ಎಸ್. ಬೆಣ್ಣೆ, ನ್ಯಾಯವಾದಿ ಹುಂಬಿ, ಸುಕ್ಯಾನ ಸಾಲಿ, ಶೈಲಾ ನರಗುಂದ, ಸಾವಿತ್ರಿ ಹಟ್ಟಿ, ಮಹಬೂಬಿ ಮಟಗೇರ, ಶಾಂತವ್ವ ಅಂಗಡಿ, ಶಂಕ್ರಗೌಡ ಪಾಟೀಲ, ಗ್ರಾಪಂ ಸದಸ್ಯರು, ಲೋಹ ಸಂಗ್ರಹಣಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.