ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

Lingaraj Badiger
Updated On : 17 Jan 2014, 10:45 am

ನರಗುಂದ:  ಪಟ್ಟಣದ ಸೋಮಾಪುರ ಹಾಗೂ ರಾಚಯ್ಯ ನಗರದ ಪರಿಶಿಷ್ಟ ಜಾತಿಯ ಮಹಿಳೆಯರು ಮತ್ತು ಪುರುಷರು ಗುರುವಾರ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವಂತೆ ಶಾಸಕ ಬಿ.ಆರ್. ಯಾವಗಲ್ಲ ಅವರಿಗೆ ಮನವಿ ಸಲ್ಲಿಸಿದರು. ಅತಿ ಹಿಂದುಳಿದ ಬಡಾವಣೆಯೆಂದು ಕರೆಯುವ ರಾಚಯ್ಯ ನಗರದಲ್ಲಿ 500 ರಿಂದ 600 ರವರೆಗೆ ದಲಿತ ಕುಟುಂಬಗಳು ವಾಸ ಮಾಡುತ್ತಿವೆ. ಆದರೆ, ಅವರಿಗೆ ಬಹಿರ್ದೆಸೆಗೆ ಹೋಗಲು ಅಲ್ಲಿ ಯಾವುದೇ ಶೌಚಾಲಯ ಇರುವುದಿಲ್ಲ. ಇದರಿಂದ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದು ಕೂಡಲೇ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಎಸ್.ಕೆ. ದಂಡಾಪುರ, ಎಫ್.ವೈ. ದೊಡಮನಿ, ಬಸವರಾಜ ಕೇಳಗೆರಿ, ಸಂಕಪ್ಪ ಕದಂ, ಶಿವಪುತ್ರಪ್ಪ ನಾಯ್ಕರ, ವಿರೂಪಾಕ್ಷಪ್ಪ ಜೋಗಣ್ಣವರ, ದುರಗಪ್ಪ ದಂಡಾಪುರ, ಗುರುನಾಥ ದೊಡ್ಡಮನಿ, ಫಗೀರಪ್ಪ ಜೋಗಣ್ಣವರ, ಧರ್ಮರಾಜ ರಂಗಣ್ಣವರ, ಬಸಪ್ಪ ಹೂಲ್ಲೆನವರ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement