ಇಂದಿನಿಂದ ಎನ್ನೆಸ್ಸೆಸ್ ವಿಶೇಷ ಶಿಬಿರ
ಹೊಳೆಆಲೂರು: ಇಲ್ಲಿನ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2013-14ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ 1 ಮತ್ತು 2ನೇ ಘಟಕಗಳ ವಿಶೇಷ ವಾರ್ಷಿಕ ಶಿಬಿರ ದತ್ತು ಗ್ರಾಮ ತಮಿನಾಳದಲ್ಲಿ ಜ. 18ರಿಂದ ಆರಂಭವಾಗಲಿದೆ. ಜ.18ರಿಂದ ಜ. 24ರ ವರೆಗೆ ಏಳುದಿನಗಳ ಕಾಲ ನಡೆಯಲಿರುವ ವಿಶೇಷ ಶಿಬಿರದ ಸಾನ್ನಿಧ್ಯವನ್ನು ಯಚ್ಚರಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಬಾಗಲಕೋಟೆ ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಜಿ.ಬೀರನೂರ ವಹಿಸಲಿದ್ದಾರೆ. ಅತಿಥಿಗಳಾಗಿ ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಬಾದಾಮಿ ತಹಸೀಲ್ದಾರ್ ಅಜಿತ ದೇಸಾಯಿ, ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ, ಗ್ರಾಪಂ ಅಧ್ಯಕ್ಷೆ ಶೈಲಾ ತಳವಾರ, ಬಸವರಾಜ ಬಾರಕೇರ, ಸುರೇಶ ಬಸರಿ, ಮಮತಾಜ ನದಾಫ, ವೀರಯ್ಯ ಬೆಳವಟಗಿಮಠ, ಎಸ್.ಜಿ. ಮೂಲಿಮನಿ ಆಗಮಿಸುವರು.
ಶಿಬಿರದ ಯೋಜನೆಗಳಲ್ಲಿ ಗಟಾರ ತೋಡುವದು, ರಸ್ತೆ ನಿರ್ಮಾಣ, ಗ್ರಾಮ ನೈರ್ಮಲ್ಯ, ಪರಿಸರ ಅಭಿವೃದ್ಧಿ ಕಾರ್ಯಕ್ರಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಏಡ್ಸ್ ಬಗ್ಗೆ ತಿಳಿವಳಿಕೆ, ನಾಯಕತ್ವದ ಗುಣ ಬೆಳೆಸುವದು, ಇಂಗು ಬಚ್ಚಲ ನಿರ್ಮಾಣ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾತ್ರಿ ತಜ್ಞರಿಂದ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಂದ ಪ್ರತಿದಿನ ಮನರಂಜನಾ ಕಾರ್ಯಕ್ರಮ ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.