ಇಂದು ಸ್ನೇಹ ಸಮ್ಮೇಳನ
ಗದಗ: ಮೈಲಾರಪ್ಪ ಮೆಣಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಕನ್ನಡ ಹಿರಿಯ ಪ್ರಾಥಮಿಕ, ಆಂಗ್ಲ ಹಿರಿಯ ಪ್ರಾಥಮಿಕ, ಕನ್ನಡ ಮತ್ತು ಆಂಗ್ಲ ಪ್ರೌಢಶಾಲೆಗಳು, ಪಪೂ ಮತ್ತು ಪ್ರಥಮ ದರ್ಜೆ ಕಾಲೇಜುಗಳ ವಾರ್ಷಿಕ ಸ್ನೇಹ ಸಮ್ಮೇಳನವು ಜ. 18ರ ಬೆಳಗ್ಗೆ 9 ಗಂಟೆಗೆ ಮೈಲಾರಪ್ಪ ಮೆಣಸಗಿ ಕಾಲೇಜಿನ ಆವರಣದಲ್ಲಿ ಜರುಗಲಿದೆ. ಎಂ.ಎಂ.ಎಂ. ಟ್ರಸ್ಟ್ನ ಕಾರ್ಯಾಧ್ಯಕ್ಷ ಜಯದೇವ ಮೆಣಸಗಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದಿನಿಂದ ಮಕ್ಕಳ ಹಬ್ಬ
ಗದಗ: ನಗರದ ಬಿಪಿನ್ ಚಿಕ್ಕಟ್ಟಿ ಪಪೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜ. 18ರ ಮತ್ತು ಜ. 19ರಂದು ಮಕ್ಕಳ ಹಬ್ಬ-2014 ಜರುಗಲಿದೆ. ಜ. 18ರಂದು ಬೆಳಗ್ಗೆ 10 ಗಂಟೆಗೆ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಕೊಪ್ಪರ ವಹಿಸುವರು. ಅತಿಥಿಗಳಾಗಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ, ಚಂಪಕಮಾಲಾ ಮುಂತಾದವರು ಉಪಸ್ಥಿತರಿರುವರು.ಪ್ರೊ. ಭಾಸ್ಕರ ಮೇಡಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಲ್.ಕೆ. ಮೇರವಾಡೆ ವಹಿಸುವರು. ಅತಿಥಿಗಳಾಗಿ ಮುಕುಂದ ಪೊತ್ನೀಸ್, ಸಿ.ಕೆ.ಎಚ್. ಶಾಸ್ತ್ರಿ, ಬಾಬು ಬಳ್ಳಾರಿ, ಅಶೋಕಕುಮಾರ ವಾಲ್ಮೀಕಿ ಆಗಮಿಸುವರು. ಜ. 19ರಂದು ಬೆಳಗ್ಗೆ 10 ಗಂಟೆಗೆ ಜರುಗುವ ಕಾರ್ಯಕ್ರಮದಲ್ಲಿ ಪ್ರಾ. ಕೆ.ಎಚ್. ಬೇಲೂರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವೆಂಕಟೇಶ ಕಟ್ಟಿಮನಿ, ಅರುಣ ಅಬ್ಬಿಗೇರಿ, ಅಂಜನಾ ಮಾಳಿ, ಅಪೂರ್ವ ಮಾಳಿ ಮುಂತಾದವರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.