ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಂಡೆ ಕುಟುಂಬಕ್ಕೆ ರು. 1 ಕೋಟಿ ಪರಿಹಾರಕ್ಕೆ ಆಗ್ರಹಿಸಿ ಮನವಿ

Rashmi Kasaragodu
Updated On : 18 Jan 2014, 1:27 am

ಗದಗ: ಗುಲ್ಬರ್ಗಾದಲ್ಲಿ ಈಚೆಗೆ ನಡೆದ ಭೂಗತ ಪಾತಕಿ ಮುನ್ನಾ ಜತೆ ಗುಂಡಿನ ಕಾಳಗದಲ್ಲಿ ಮೃತ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿ ಗುರುವಾರ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಗುಲ್ಬರ್ಗಾದಲ್ಲಿ ಜ. 8ರಂದು ನಡೆದ ಭೂಗತ ಪಾತಕಿ ಮುನ್ನಾ ದರ್ಬಾಜಾ ಜತೆ ನಡೆದ ಗುಂಡಿನ ಕಾಳಗದಲ್ಲಿ ತಲೆಗೆ ಗುಂಡೇಟಿನಿಂದ ಗಾಯಗೊಂಡಿದ್ದ ದಕ್ಷ, ಪ್ರಾಮಾಣಿಕ ಪಿಎಸ್ಐ ಮಲ್ಲಿಕಾರ್ಜುನ ಕರಬಸಪ್ಪ ಬಂಡೆ ಇವರ ಹೈದ್ರಬಾದಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಅತೀ ದುಖ-ದ ಸಂಗತಿಯಾಗಿದ್ದು, ಇಂತಹ ದಕ್ಷ ಅಧಿಕಾರಿಯ ಕುಟುಂಬದವರಿಗೆ ರಾಜ್ಯ ಸರ್ಕಾರ ಕೇವಲ 15 ಲಕ್ಷ ಪರಿಹಾರ ಘೋಷಿಸಿದ್ದು ಯಾವುದಕ್ಕೆ ಸಾಲದು ಎಂದು ಮನವಿ ಮಾಡಿದರು. ಈ ಸಂದರ್ಭ ಜೈಭೀಮ ಸೇನಾ ಗದಗ ಜಿಲ್ಲಾ ಸಂಘಟನೆ ಅಧ್ಯಕ್ಷ ಗಣೇಶ ಹುಬ್ಬಳ್ಳಿ, ಗದಗ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪರಾಪೂರ, ಉಪಾಧ್ಯಕ್ಷ ಮಂಜುನಾಥ ತೌಜಲ, ರಾಜ್ಯ ಕಾರ್ಯದರ್ಶಿ ಅಶೋಕ ಹಾದಿಮನಿ, ವಿಜಯ ಕಲ್ಮನಿ, ದೀಪಕ ಕಲ್ಮನಿ, ಪರಶುರಾಮ ಸಂಗಾಪೂರ, ಓಬಳೇಶ ಯಶವಂತಪುರ, ವಿಜಯ ತಳಗೇರಿ, ಮಂಜುನಾಥ ಪರಾಪೂರ, ಹೇಮಂತ ಹುಬ್ಬಳ್ಳಿ, ಪರಶುರಾಮ ಸೀತಿಮನಿ, ಪ್ರೇಮ ಹುಬ್ಬಳ್ಳಿ, ಶಂಕರ ಹುಬ್ಬಳ್ಳಿ, ಮರಿಯಪ್ಪ ಪರಾಪೂರ, ಮಂಜುನಾಥ ಕಲ್ಲೂರ, ಮಂಜುನಾಥ ಪರಾಪೂರ, ನಾಗರಾಜ ಗುತ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement