ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭೀಕರ ರಸ್ತೆ ಅಪಘಾತ: ಐವರ ದುರ್ಮರಣ

Rashmi Kasaragodu
Updated On : 18 Jan 2014, 1:27 am

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಮದಗುಣಕಿ ಗ್ರಾಮದ ಬಳಿ ಎರಡು ಟ್ರ್ಯಾಕ್ಸ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
ರೋಣ ಕಡೆಯಿಂದ ನರಗುಂದಕ್ಕೆ ಹೋಗುತ್ತಿದ್ದ ಟ್ರ್ಯಾಕ್ಸ್ ಹಾಗೂ ನರಗುಂದದಿಂದ ರೋಣ ಕಡೆಗೆ ತೆರಳುತ್ತಿದ್ದ ಟ್ರ್ಯಾಕ್ಸ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ್ನು ಗೋಕಾಕ ತಾಲೂಕಿನ ಉಪ್ಪಾರಗಟ್ಟಿ ಗ್ರಾಮದ ರಾಘು ಪಾಟೀಲ (32), ದಿನೇಶ ಬಂಡಿ (50), ಸಿದ್ಧಪ್ಪ ಕೊಳವಿ (50), ಸಿದ್ಧಪ್ಪ ಮೊದಲಬಾವಿ (22) ಎಂದು ಗುರುತಿಸಲಾಗಿದ್ದು, ಇನ್ನೋರ್ವ ಮೃತನ ಹೆಸರು ತಿಳಿದು ಬಂದಿಲ್ಲ. ಈ ಅಪಘಾತದಲ್ಲಿ 19ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ 12ಕ್ಕೂ ಹೆಚ್ಚು ಜನರನ್ನು ಕಿಮ್ಸ್ಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮೃತರೆಲ್ಲರೂ ಸಿಂಧನೂರು ತಾಲೂಕಿನ ಸಿದ್ಧಪರ್ವತದ ಅಂಬಾದೇವಿ ದರ್ಶನಕ್ಕೆ ತೆರಳಿ ಮರಳಿ ಗೋಕಾಕಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement