ಮೈಲಾರಲಿಂಗೇಶ್ವರ ಜಾತ್ರೆ
ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಮೈಲಾರಲಿಂಗೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಜಾತ್ರೆಯ ಅಂಗವಾಗಿ ಬೆಳಗ್ಗೆ ಕೋಟೆಪ್ಪ ಮೇಟಿಯವರ ಮನೆಯಿಂದ ಮೆರವಣಿಗೆ ಪ್ರಾರಂಭಿಸಿ, ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ನಂತರ ಶಿಬಾರಗಟ್ಟಿ ಹತ್ತಿರಕ್ಕೆ ಬಂದು ತಲುಪಿತು. ಮೆರವಣಿಗೆ ನಂತರ ಶಿಬಾರಗಟ್ಟಿ ಹತ್ತಿರ ಸರಪಳಿ ಪವಾಡ, ಕಾರಿಮುಳ್ಳು, ಬಾರಿ ಮುಳ್ಳಿನ ಪವಾಡ, ಕೈಪವಾಡ, ಶಸ್ತ್ರ ಹಾಕಿಕೊಳ್ಳುವುದು ಸೇರಿದಂತೆ ಅನೇಕ ಪವಾಡಗಳು ಜರುಗಿದವು.