ಹೆಚ್ಚಿನ ಲೋಹ ಸಂಗ್ರಹಿಸಲು ಬಂಡಿ ಕರೆ
ಗಜೇಂದ್ರಗಡ: ಉಕ್ಕಿನ ಮನುಷ್ಯನೆಂದೇ ಹೆಸರಾದ ಸರ್ದಾರ ವಲ್ಲಭಾಯಿ ಪಟೇಲರ ಪುತ್ಥಳಿ ಅನಾವರಣ ಕುರಿತು ಈಗಾಗಲೇ ದೇಶಾದ್ಯಾಂತ ಲೋಹ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರೋಣ ಮತಕ್ಷೇತ್ರ ವತಿಯಿಂದ ಹೆಚ್ಚು ಲೋಹ ಸಂಗ್ರಹಿಸಿ ರಾಷ್ಟ್ರ ನಾಯಕನ ಪುತ್ಥಳಿ ನಿರ್ಮಾಣದಲ್ಲಿ ಪಾಲ್ಗೊಳ್ಳೋಣ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಅವರು ಗುರುವಾರ ಪಟ್ಟಣದ ಕಾರ್ಯಾಲಯದಲ್ಲಿ ರೋಣ ಮತಕ್ಷೇತ್ರದ ರೈತ ಮೋರ್ಚಾ ವತಿಯಿಂದ ಸರ್ದಾರ ವಲ್ಲಭಾಯಿ ಪಟೇಲರ ಪ್ರತಿಮೆ ಪ್ರತಿಷ್ಟಾಪನೆಯ ಲೋಹ ಸಂಗ್ರಹಣಾ ಕೋರ್ ಕಮಿಟಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ, ಜಿಲ್ಲಾ ಲೋಹ ಸಂಗ್ರಹಣಾ ಸಮಿತಿ ಜಿಲ್ಲಾ ಸಂಚಾಲಕ ಮೋಹನ ಮಾಳಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉಪಸಂಚಾಲಕ ಶ್ರೀಪತಿ ಉಡಪಿ, ರೋಣ ಮತಕ್ಷೇತ್ರದ ರೈತ ಮೋರ್ಚಾದ ಅಧ್ಯಕ್ಷ ರಾಚನಗೌಡ, ಅಶೋಕ ನವಲಗುಂದ ಸೇರಿದಂತೆ ಸ್ಥಳೀಯ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.