ಅನುಪಮಾ ಮಳಗಿಗೆಪಿಎಚ್ಡಿ ಪ್ರದಾನ
ಗದಗ: ಅನುಪಮಾ ಮಳಗಿ (ಮುದ್ದೇಬಿಹಾಳಕರ್) ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಕೌಸಾಳಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್ ನಿರ್ದೇಶಕ ಪ್ರೊ. ಎ.ಎಚ್. ಚಚಡಿಯವರ ಮಾರ್ಗದರ್ಶನದಲ್ಲಿ ಮಂಡಿಸಿದ ಎಚ್.ಆರ್.ಡಿ. ಇಂಟರ್ವೆನ್ಶನ್ ಟು ಇಂಪ್ರೂವ್ ದಿ ಸೊಶಿಯೋ ಎಕನಾಮಿಕ್ ಕಂಡೀಶನ್ಸ್ ಆಫ್ ವರ್ಕಿಂಗ್ ವಿಮೆನ್ ಇನ್ ಗಾರ್ಮೆಂಟ್ಸ್ ಇಂಡಸ್ಟ್ರೀ ವಿಥ್ ಸ್ಪೆಸಿಫಿಕ್ ರೆಫರನ್ಸ್ ಟು ಬೆಂಗಳೂರು ಅರ್ಬನ್ ಡಿಸ್ಟ್ರಿಕ್ಟ್ ಎಂಬ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪ್ರದಾನ ಮಾಡಿದೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಗುರಣ್ಣ ಬಳಗಾನೂರ, ಎ.ಡಿ. ಗೋಡಖಿಂಡಿ, ಅನಿಲ ಇನಾಮದಾರ ಮುಂತಾದವರು ಅಭಿನಂದಿಸಿದ್ದಾರೆ.