ಇಂದಿನಿಂದ ಜಿಲ್ಲಾಮಟ್ಟದ ಯುವ ಕಾರ್ಯಾಗಾರ
ಮುಂಡರಗಿ: ಪಟ್ಟಣದ ಪುರಸಭೆಯಲ್ಲಿ ಜ. 19 ಹಾಗೂ 20ರಂದು 2 ದಿನಗಳ ಕಾಲ ಜಿಲ್ಲಾ ಮಟ್ಟದ ಯುವ ಕಾರ್ಯಾಗಾರ ಪ್ರಾರಂಭಗೊಳ್ಳಲಿದ್ದು. ಗದಗ ಜಿಲ್ಲೆಯಲ್ಲಿ ನೋಂದಾಯಿಸಿಲ್ಪಟ್ಟ ಯುವಕ, ಯುವತಿ ಪ್ರತಿನಿಧಿಗಳು ಹಾಗೂ 15ರಿಂದ 30 ವರ್ಷದ ವಯೋವುತಿ ಹೊಂದಿರುವ ಶಾಲಾ ಕಾಲೇಜುಗಳ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಭಾಗವಹಿಸುವ ರೋಣ, ಶಿರಹಟ್ಟಿ, ನರಗುಂದ, ಗದಗ ತಾಲೂಕು ಪ್ರತಿನಿಧಿಗಳಿಗೆ ಸಾಮಾನ್ಯ ಪ್ರಯಾಣ ದರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ತರಬೇತಿಯಲ್ಲಿ ಸಕಾಲ, ಸಂಪೂರ್ಣ ಸ್ವಚ್ಛತಾ ಆಂದೋಲನ, ಗ್ರಾಮೀಣ ಜನತೆಗೆ ಯುವ ಜನತೆ ಪಾತ್ರ, ರಾಷ್ಟ್ರೀಯ ಭಾವೈಕ್ಯತೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ತರಬೇತಿ 100 ಜನಕ್ಕೆ ಮಾತ್ರ ಸಿಮೀತವಾಗಿರುತ್ತದೆ ಎಂದು ತಾಲೂಕು ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.