ಇಂದು ಈದ್ಮಿಲಾದ್ ಆಚರಣೆ
ಗಜೇಂದ್ರಗಡ: ಸ್ಥಳೀಯ ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದ ಈದ್ಮಿಲಾದ್ ಆಚರಣೆಯು ಜ. 19ರ ಸಂಜೆ 6ಗಂಟೆಗೆ ಈದ್ಗಾ ಮೈದಾನದಲ್ಲಿ ನಡೆಯಲಿದೆ. ಹಜರತ್ ಅಲ್ಲಮಾ ಮೌಲಾನಾ ಮಹಮ್ಮದ ಝಮಾ ಹಾಗೂ ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸುವರು. ಅಂಜುಮನ್ ಇಸ್ಲಾಂ ಕಮಿಟಿ ಮುಖ್ಯಸ್ಥ ಎಂ.ಎಚ್. ಕೋಲಕಾರ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಶಾಸಕ ಜಿ.ಎಸ್. ಪಾಟೀಲ, ವಿಪ ಸದಸ್ಯ ನಾಗರಾಜ ಛಬ್ಬಿ, ಮಾಜಿ ಸಂಸದ ಐ.ಜಿ. ಸನದಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ, ಸುಪೀಸಾಬ ಕಾತರಕಿ, ದಸ್ತಗಿರಸಾಬ ಗೊಡೇಕಾರ ಅವರನ್ನು ಸನ್ಮಾನಿಸಲಾಗುವುದು. ನ್ಯಾಯವಾದಿ ವಿ.ಆರ್. ಗುಡಿಸಾಗರ, ಕಾಂಗ್ರೆಸ್ನ ಗದಗ ಜಿಲ್ಲಾ ಉಪಾಧ್ಯಕ್ಷ ಅಶೋಕ ಬಾಗಮಾರ ಮುಂತಾದವರು ಪಾಲ್ಗೊಳ್ಳುವರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.