ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಸಚಿವ ವೀರಪ್ಪ ಮೊಯ್ಲಿಗೆ ಮನವಿ

Rashmi Kasaragodu
Updated On : 19 Jan 2014, 12:10 pm

ನರಗುಂದ:  ಉತ್ತರ ಕರ್ನಾಟಕದ 4 ಜಿಲ್ಲೆಯ 9 ತಾಲೂಕಿನ ರೈತ ಸಮುದಾಯದ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿ ನಾಲಾಗಳನ್ನು ಮಲಪ್ರಭಾ ಜಲಾಶಯಕ್ಕೆ ಜೋಡಿಸಬೇಕೆಂದು ಈ ಭಾಗದ ರೈತರು 15 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಈ ಯೋಜನೆ ನೆನೆಗುದಿಗೆ ಬಿದ್ದ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷ ವಿಜಯ ಕುಲಕರ್ಣಿ, ಪದಾಧಿಕಾರಿ ಬಸನಗೌಡ ಚಿಕ್ಕನಗೌಡ್ರ, ಚಳಪ್ಪ ನಾಯ್ಕರ, ರುದ್ರಪ್ಪ ಗಾಣಿಗೇರ, ಅಲ್ಲಸಾಬ್ ನದಾಫ, ಗಣೇಶ ಪಲ್ಲಿ, ಅಣ್ಣಪ್ಪಗೌಡ ಪಾಟೀಲ (ಮೂಗನೂರ), ವಿಕಾಸ ಸೊಪ್ಪಿನ, ಬಸಪ್ಪ ಗುಡದೇರಿ, ಗುರುಶಾಂತ ನರಸಾಪುರ, ಎಂ.ಟಿ. ಬದಾಮಿ ಮುಂತಾದವರು ಜ. 19ರಂದು ಕಾರ್ಕಳದಲ್ಲಿ ಬೆಳಗ್ಗೆ 11.30 ಗಂಟೆಗೆ ಕೇಂದ್ರ ಪರಿಸರ ಸಚಿವ ವೀರಪ್ಪ ಮೊಯ್ಲಿಯವರನ್ನು ಭೇಟಿಯಾಗಿ ಅರಣ್ಯ ಇಲಾಖೆಯ ಪರವಾನಗಿ ನೀಡಬೇಕೆಂದು ಮನವಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement