ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಸ್ಪಂದನಾ ಮಹಿಳಾ ಮಂಡಳ ಉದ್ಘಾಟನೆ

Rashmi Kasaragodu
Updated On : 19 Jan 2014, 12:11 pm

ಗಜೇಂದ್ರಗಡ:  ಸ್ಥಳೀಯ ಜಗದಂಬಾ ಸಮುದಾಯ ಭವನದಲ್ಲಿ ಸ್ಪಂದನಾ ಮಹಿಳಾ ಮಂಡಳದ ಉದ್ಘಾಟನಾ ಸಮಾರಂಭ ಜ. 19ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಮೈಸೂರ ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಸ್ಪಂದನಾ ಮಹಿಳಾ ಮಂಡಳ ಅಧ್ಯಕ್ಷೆ ಶಶಿಕಲಾ ಪಾಟೀಲ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷೆ ಕೀರ್ತಿ ಮಾಲಿನಿ ಘೋರ್ಪಡೆ, ರೋಣ ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಗದಗ, ಪುರಸಭೆ ಸದಸ್ಯೆ ಮಕ್ತುಂಭಿ ಹಣಗಿ, ಶಾರದಾ ರಾಠೋಡ, ಸುಜಾತಾ ಚುಂಚಾ, ಶಾರವ್ವ ತಳವಾರ, ಗೀತಾ ಕೊಪ್ಪದ, ನಾಜಬೇಗಂ ಯಲಿಗಾರ, ಡಾ. ಪಾರ್ವತಿ ಚವಡಿ, ಸವಿತಾ ಭಾಂಡಗೆ, ಮಹಾದೇವಿ ಗಂಜಿಗೌಡ್ರ, ರೇಣುಕಾ ಹೂಗಾರ, ನೀಲವ್ವ ಕುರುಮನಾಳ, ದೀಪಾ ಚನ್ನಿ, ಸುಮಂಗಲಾ ಇಟಗಿ ಇತರರು ಪಾಲ್ಗೊಳ್ಳುವರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement