ಕಲೆ ಸರ್ವವ್ಯಾಪಿಯಾಗಿ ಬೆಳೆದಿದೆ: ಶಿವಾನಂದ
ಗದಗ: ಮಾನವನ ಮನೋಲ್ಲಾಸಕ್ಕಾಗಿ ಸೀಮಿತವಾದ ಚಿತ್ರಕಲೆಯನ್ನು ಕಲಾವಿದರು ಸೃಜನಶೀಲತೆಯಿಂದ ಆಧುನಿಕ ದಿನಮಾನದಲ್ಲಿ ವಿಸ್ತಾರವಾಗಿ ಬೆಳೆಸಿದ್ದಾರೆ. ಆದರೆ ಇಂದು ನಮ್ಮನ್ನು ಆಕರ್ಷಿಸುತ್ತಿರುವ ತಂತ್ರಜ್ಞಾನದಲ್ಲಿ ಕಲೆ ಆವರಿಸಿಕೊಂಡು ಸರ್ವ ವ್ಯಾಪಿಯಾಗಿದೆ ಎಂದು ನರಗುಂದ ತಾಲೂಕು ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಜಿಟ್ಟಪ್ಪನವರ ಹೇಳಿದರು. ಅವರು ಈಚೆಗೆ ನಗರದ ವಿಜಯ ಕಲಾ ಮಂದಿರ ಸಂಸ್ಥೆ ವತಿಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಷ್ಠಾಪನಾ ಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಅಶೋಕ ಅಕ್ಕಿ ಮಾತನಾಡಿದರು. ಪ್ರಾಚಾರ್ಯ ಪಿ.ವಿ. ಹಿರೇಮಠ, ಸಿ.ವಿ. ಬಡಿಗೇರ, ಆರ್.ವಿ. ಹೆಗಡೆ, ಆರ್.ಡಿ. ಕಡ್ಲಿಕೊಪ್ಪ, ಕೆ.ಎಂ.ಕೃಷ್ಣ, ಬಿ.ಸಿ. ಕುತ್ನಿ, ಎಸ್.ವಿ.ಗುಂಜಾಳ ಪಾಲ್ಗೊಂಡಿದ್ದರು.