ಧೂಮಪಾನದಿಂದ ಆರೋಗ್ಯ, ಪರಿಸರಕ್ಕೆ ಕುತ್ತು
ಮುಳಗುಂದ: ಧೂಮಪಾನದಿಂದ ಆರೋಗ್ಯ ಕೆಡುವುದರ ಜತೆಗೆ ಸುತ್ತಮುತ್ತಲ ಪರಿಸರ ಹಾಳಾಗುತ್ತದೆ ಎಂದು ಮುಳಗುಂದ ಠಾಣೆಯ ಪಿಎಸ್ಐ ಪಿ.ಜಿ. ಕೌವಟಗಿ ಹೇಳಿದರು. ಅವರು ಈಚೆಗೆ ಗದಗ ಜಿಲ್ಲಾ ಪೋಲಿಸ್ ಇಲಾಖೆ ವತಿಯಿಂದ ಸ್ಥಳೀಯ ಅಂಜುಮನ್ ಇಸ್ಲಾಂ ಎ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಧೂಮಪಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಲೆಯ ಶಿಕ್ಷಕ ಎಸ್.ಜಿ. ಉಮರ್ಜಿ ಮಾತನಾಡಿ, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ವಿವರಿಸಿದರು. ಶಿಕ್ಷಕ ಆರ್.ಐ. ಚಪ್ಪರಬಂದ, ಎಲ್.ಕೆ.ಚೌಕಿಮಠ, ಎಂ.ಎನ್. ಓಲಿ, ಎಚ್.ಕೆ. ಬಿಳಗಿ, ಎನ್.ಎನ್.ಪಿಂಜಾರ ಮುಂತಾದವರು ಉಪಸ್ಥಿತರಿದ್ದರು.