ಬ್ರೈಲ್ಲಿಪಿ ಅಂಧರಿಗೆ ವರದಾನ: ಮುದ್ದಣ್ಣ
ಗದಗ: ಅಂಧರನ್ನು ಸುಶಿಕ್ಷಿತರನ್ನಾಗಿಸಲು ಬ್ರೈಲ್ಲಿಪಿ ಅತ್ಯಂತ ಮಹತ್ವದ್ದಾಗಿದೆ. ಅಂಧರಿಗೆ ಅದು ವರದಾನವಾಗಿದೆ ಎಂದು ಅಂಧ ಶಿಕ್ಷಕ ಮುದ್ದಣ್ಣ ಕೊನೆಹೊಲ ಹೇಳಿದರು. ಅವರು ಈಚೆಗೆ ನಗರದ ಡಾ. ಪಿ.ಜಿ.ಎ.ಎಸ್. ಸಮಿತಿಯ ಪಂಡಿತ ಪಂಚಾಕ್ಷರ ಗವಾಯಿಗಳವರ ಅಂಧರ ವಸತಿಯುತ ವಿಶೇಷ ಸಂಗೀತ ಶಾಲೆಯಲ್ಲಿ ಅಂಧರ ಲಿಪಿ ಕಂಡುಹಿಡಿದ ಲೂಯಿ ಬ್ರೈಲ್ ಅವರ 205ನೇ ಜಯಂತ್ಯುತ್ಸವದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಆರ್. ಹಿರೇಮಠ ಮಾತನಾಡಿ, ಅನಕ್ಷರಸ್ಥ ಅಂಧರಿಗೆ ಅಕ್ಷರಸ್ಥರನ್ನಾಗಿಸಿದ ಕೀರ್ತಿ ಫ್ರಾನ್ಸ್ ದೇಶದ ಲೂಯಿ ಬ್ರೈಲ್ ಅವರಿಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಕೆ.ವಿ. ಮುದ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಧ ಶಿಕ್ಷಕ ಮಂಜುನಾಥ ಭಟ್, ಪಂಚಾಕ್ಷರಿ ನವಲಗುಂದ ಸೇರಿದಂತೆ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.