ಯಶಸ್ಸಿಗೆ ಬದ್ಧತೆ ಮುಖ್ಯ: ನಂದಕುಮಾರ
ಗದಗ: ಯಾವುದೇ ಕೆಲಸದಲ್ಲಿ ಶಿಸ್ತು, ಸಮಯ ಪ್ರಜ್ಞೆಯ ಜತೆಗೆ ಕಾರ್ಯದ ಬಗ್ಗೆ ಬದ್ಧತೆ ಇದ್ದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ವೋಡಾಪೋನ್ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್ ನಂದಕುಮಾರ ಅಭಿಪ್ರಾಯ ಪಟ್ಟರು. ಅವರು ಈಚೆಗೆ ಜಿಲ್ಲಾ ವೋಡಾಪೋನ್ ವಿತರಕರ ಒಕ್ಕೂಟವು ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿತರಕ ಚಂದ್ರು ಬಾಳಿಹಳ್ಳಿಮಠ, ರವಿ ಮಾಳೆಕೊಪ್ಪಮಠ, ಗಜೇಂದ್ರಗಡದ ನಾಗರಾಜ, ಉಮೇಶ ಕೋಠಾರಿ, ಆನಂದ ಭಂಡಾರಿ, ಗಣೇಶ, ಶ್ರೀನಿವಾಸ, ಮಹಾಂತೇಶ, ಕುಶಾ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಿಫ್ ನಿರೂಪಿಸಿದರು. ಹರೀಷ ವಂದಿಸಿದರು.