ರಥದ ಗಾಲಿಗೆ ಪೂಜೆ:ರಂಗಪ್ಪಜ್ಜನ ಜಾತ್ರೆಗೆ ಚಾಲನೆ
ಗದಗ: ಬೆಟಗೇರಿಯಲ್ಲಿರುವ ರಂಗಪ್ಪಜ್ಜನವರ ಜಾತ್ರೆಯು ಫೆ. 9ರಂದು ನಡೆಯಲಿದ್ದು ಅದರ ಅಂಗವಾಗಿ ರಥದ ಗಾಲಿಗಳ ಪೂಜೆಯನ್ನು ಈಚೆಗೆ ನಗರಸಭೆ ಸದಸ್ಯ ಶ್ರೀನಿವಾಸ ಕರಿ ನೆರವೇರಿಸಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಎಂ.ಆರ್. ರಾಜೋಳಿ, ಗಣೇಶಸಿಂಗ್ ಬ್ಯಾಳಿ, ಅಮರೇಶ ಚ್ಯಾಗಿ, ಎಸ್.ಆರ್. ಬಸವಾ, ಹೇಮಣ್ಣ ಮುಳಗುಂದ, ಭೋಜಪ್ಪ ಹೆಗಡೆ, ನಿಂಗಪ್ಪ ಚೇಗೂರ, ಎಂ.ಸಿ. ಅರಣಿ, ರುದ್ರಪ್ಪ ಬಾದರದಿನ್ನಿ, ರಾಜು ಕಟಗಿ, ಹೇಮಂತಗೌಡ ಬೆನಹಾಳ, ಗುರನಗೌಡ ಗೌಡ್ರು, ರಂಗಪ್ಪ ಹುಯಿಲಗೋಳ, ಹನುಮಂತಪ್ಪ ಜಕ್ಕಲಿ, ಚನ್ನಪ್ಪ ಹುಯಿಲಗೋಳ, ನೇತಾಜಿ ಪವಾರ ಮುಂತಾದವರು ಪಾಲ್ಗೊಂಡಿದ್ದರು.