ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಸ್ತೆ ಕಾಮಗಾರಿ ಶಾಸಕ ದೊಡ್ಡಮನಿ ಚಾಲನೆ

Rashmi Kasaragodu
Updated On : 19 Jan 2014, 12:11 pm

ಮುಂಡರಗಿ:  ತಾಲೂಕಿನ ಶಿಂಗಟಾಲೂರು ಬಳಿ ಪಿ.ಎಂ.ಜಿ.ಎಸ್.ವೈ. ಯೋಜನೆಯಡಿಯಲ್ಲಿ ರು. 12ಲಕ್ಷ ಮೊತ್ತದಲ್ಲಿ ಮರುಡಾಂಬರೀಕರಣ ಕಾಮಗಾರಿಗೆ ಈಚೆಗೆ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೂಮಿಪೂಜೆ ನೆರವೇರಿಸಿದರು. ತಾಪಂ ಸದಸ್ಯ ರಾಮಾಂಜನೇಯರಾಜು ಪೆನ್ಮತ್ಸ, ಚೆನ್ನವೀರಪ್ಪ ಯಲಿಗಾರ, ಬಾಲಚಂದ್ರ ತಳವಾರ, ಮಹಾವೀರ ಮುತ್ತಿನ, ಹೇಮಂತಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.



 ಕಲಿಕೋತ್ಸವ:ವಿದ್ಯಾರ್ಥಿಗಳ ಉತ್ತಮ ಸಾಧನೆ


ಗದಗ:  ಗದಗ ಗ್ರಾಮೀಣ ವಲಯದ ತಾಲೂಕು ಮಟ್ಟದ ಕಲಿಕೋತ್ಸವ ಸ್ಪರ್ಧೆಯಲ್ಲಿ ತಾಲೂಕಿನ ಬೆಳಹೊಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ. ರಂಜಿತಾ ಪಾಟೀಲ ಸಿಂಗಿಂಗ್ ರೈಮ್ಸ್ನಲ್ಲಿ ಪ್ರಥಮ, ಕನ್ವರ್ಶನ್ನಲ್ಲಿ ದ್ವಿತೀಯ ಸ್ಥಾನ, ಸಂಗೀತಾ ಕುಸುಗಲ್ಲ ಕನವರ್ಶನ್ನಲ್ಲಿ ತೃತೀಯ ಸ್ಥಾನ, ವಿನಾಯಕರಡ್ಡಿ ಹುಬ್ಬಳ್ಳಿ ಸ್ಪೇಲ್ಲಿಂಗ ಗೇಮ್ಸ್ನಲ್ಲಿ ದ್ವಿತೀಯ ಸ್ಥಾನ ಮತ್ತು ಫಾತಿಮಾ ಹುಲ್ಲೂರ ಹಾಗೂ ಸಂಗಡಿಗರು ಸ್ಕೀಟ್ನಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಸ್ಡಿಎಂಸಿ ಅಧ್ಯಕ್ಷ ರಮೇಶ ರಾಜಣ್ಣವರ ಹಾಗೂ ಸದಸ್ಯರು ಹಾಗೂ ಶಾಲೆಯ ಪ್ರಧಾನ ಗುರುಗಳು ಕೆ.ಡಿ. ಬಡಿಗೇರ ಮತ್ತು ಗುರುಬಳಗ ಹಾಗೂ ಗ್ರಾಮದ ನಾಗರಿಕರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement