ಹೆದ್ದಾರಿಯಲ್ಲಿ ಹಂಪ್ ನಿರ್ಮಿಸಲು ಆಗ್ರಹ
ನರಗುಂದ: ತಾಲೂಕಿನ ಕಲಕೇರಿ, ನರಗುಂದ ನಗರ, ಭೈರನಹಟ್ಟಿ, ಕೊಣ್ಣೂರ ಗ್ರಾಮಗಳ ಮೂಲಕ ಹಾಯ್ದು ಹೋಗಿರುವ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮಗಳ ಎರಡೂ ಬದಿಯಲ್ಲಿ ತಕ್ಷಣವೇ ಹಂಪ್ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲಿ ರೋಡ್ ಬ್ರೇಕ್ಗಳು ಇಲ್ಲದೇ ಇರುವುದರಿಂದ ವಾಹನಗಳು ಅತಿಯಾದ ವೇಗದಲ್ಲಿ ಚಲಿಸುತ್ತಿದ್ದು, ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಸುರಕ್ಷಿತ ವೇದಿಕೆ ಅಧ್ಯಕ್ಷ ಗಣೇಶ ಪಲ್ಲಿ, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ, ಕುಲಕರ್ಣಿ, ಅಣ್ಣಪ್ಪಗೌಡ ಪಾಟೀಲ (ಮೂಗನೂರ,), ವಿ.ಬಿ. ಹೂಲಿ, ಜಿ.ಎಂ. ಚಿತ್ರಗಾರ, ಮುನ್ನಾ ಸಕಲಿ, ಎಂ.ಸಿ. ಕುರಹಟ್ಟಿ, ಎಂ.ಎಂ. ಗದಗ, ಕುಂಬಾರ, ಕೊರೆಗಣ್ಣವರ ಆಗ್ರಹ ಮಾಡಿದ್ದಾರೆ.