ಕಾಡು ಹಂದಿ ದಾಳಿ: ಇಬ್ಬರಿಗೆ ಗಾಯ
ಶಿರಹಟ್ಟಿ: ತಾಲೂಕಿನ ವಡವಿ ಗ್ರಾಮದಲ್ಲಿ ಶನಿವಾರ ತಡ ರಾತ್ರಿ ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಮಹಿಳೆಯರ ಮೇಲೆ ಕಾಡು ಹಂದಿ ದಾಳಿ ನಡೆಸಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಮಹಿಳೆಯರು ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರತ್ನವ್ವ ಹಾರೋಗೇರಿ, ಯಮುನವ್ವ ಪಂಚಪ್ಪ ಜ್ಯೋತಿ ಕಾಡು ಹಂದಿ ದಾಳಿಗೆ ಸಿಲುಕಿ ಗಾಯಗೊಂಡಿವರಾಗಿದ್ದಾರೆ. ಭಾನುವಾರ ಶಾಸಕ ರಾಮಕೃಷ್ಣ ದೊಡ್ಡಮನಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು. ನಂತರ ಮಾತನಾಡಿದ ಅವರು, ಗಂಭೀರ ಮಹಿಳೆಯರ ಹೆಚ್ಚಿನ ಚಿಕಿತ್ಸೆಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಸದಸ್ಯ ಸಂತೋಷ ಕುರಿ, ವೈ.ಎಸ್. ಪಾಟೀಲ, ಮಂಜು ಘಂಟಿ, ವಲಯ ಅರಣ್ಯಾಧಿಕಾರಿ ಪಿ.ಸಿ. ಹಿರೇಮನಿ, ಪಿಎಸ್‌ಐ ಆರ್.ಎಚ್. ಕಟ್ಟಿಮನಿ, ವೈದ್ಯಾಧಿಕಾರಿ ಎ.ಎ. ಮಳಗಿ ಹಾಜರಿದ್ದರು.