ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಚಿವ ತರೂರ ಭಾವಚಿತ್ರ ದಹಿಸಿ ಆಕ್ರೋಶ

Mainashree
Updated On : 20 Jan 2014, 11:59 am

ಕನ್ನಡಪ್ರಭ ವಾರ್ತೆ, ಗದಗ, ಜ. 19
ಕೇಂದ್ರ ಮಾನವ ಸಂಪನ್ಮೂಲ ಸಚಿವ ಶಶಿ ತರೂರ ಪತ್ನಿ ಸುನಂದಾ ಪುಷ್ಕರ ಸಾವಿನ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ಭಾನುವಾರ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಶಶಿ  ತರೂರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.   
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಶ್ರೀರಾಮ ಸೇನೆಯ ಸಂಚಾಲಕ ರಾಜೂ ಖಾನಪ್ಪನವರ, ಸುನಂದಾ ಪುಷ್ಕರ ಸಾವು ಅಸಹಜ. ಸುನಂದಾ ಅವರ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸಚಿವ ತರೂರ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ಮೂಲಕ ಸುದ್ದಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸುವ ವ್ಯಕ್ತಿಯಾಗಿದ್ದಾರೆ.
ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಕೇಂದ್ರ ಸರ್ಕಾರದ ವಿವಿಧ ಸಚಿವರಿಂದ ಅನಾಚಾರ, ಅನ್ಯಾಯಗಳು ನಡೆಯುತ್ತಲೇ ಇವೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಶಿವಕುಮಾರ ಮಿಟ್ಟಿಮಠ, ರಮೇಶ ಹೊಸಳ್ಳಿ, ಸಂಜೀವ ಸೂರ್ಯವಂಶಿ, ಸುರೇಶ ಹಾದಿಮನಿ, ಮುತ್ತಣ್ಣ ಭರಡಿ, ಈರಣ್ಣ ಬಳ್ಳಾರಿ, ನಾಗರಾಜ ಗದಗ, ಅನೀಲ ನಾಕೋಡ, ಬಾಬಾಸಾ ಬಾಕಳೆ, ಮಾಧವಸಾ ಕಲಬುರ್ಗಿ, ಕೀಶೋರಸಾ ಪವಾರ, ಈರಣ್ಣ ಕುರುಬನಾಳ, ಪ್ರವೀಣ ಅಪ್ಪೂಜಿ, ಆನಂದ ಹೊನ್ನಗುಡಿ, ಈರಣ್ಣ ಗಾಣಿಗೇರ, ವಿನೋದ ಹುಯೀಲಗೋಳ, ಹರೀಶ ಕಮ್ಮಾರ, ಸಚ್ಚಿನಸಾ ಖೋಡೆ, ರಾಜಣಸಾ ಶಿದ್ಲಿಂಗ, ಪವನಸಾ ಬಾಕಳೆ, ವಿಶ್ವನಾಥ ಅಂಗಡಿ, ರಾಜೀವ ಗದ್ದಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement