ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದಿನಿಂದ ಕೋಟುಮಚಗಿಯ ಹಜರತ ಜಿಂದಾಶಾವಲಿಯವರ ಉರೂಸ್

Mainashree
Updated On : 21 Jan 2014, 12:29 pm

ನರೇಗಲ್ಲ: ಜ. 21 ರಿಂದ 23 ರವರೆಗೆ ಸಮೀಪದ ಕೋಟುಮಚಗಿ ಗ್ರಾಮದ ಹಜರತ ಜಿಂದಾಶಾವಲಿ ಉರೂಸ್ ಕಾರ್ಯಕ್ರಮ ಜರುಗಲಿದೆ ಎಂದು ಹಜರತ ಜಿಂದಾಶಾವಲಿ ಗೆಳೆಯರ ಬಳಗದ ಗೌರವಾಧ್ಯಕ್ಷ ಜೀವನಸಾಬ ಅತ್ತಾರ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಜ. 21 ರಿಂದ 23 ರವರೆಗೆ ಜರುಗಲಿರುವ ಉರೂಸ್ನ್ನು ಅತಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಉರೂಸ್ಗೆ ಲಕ್ಷಾಂತರ ಭಕ್ತಾದಿಗಳು ಆಗಮಿಸಲಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಜ. 21 ರಂದು ಗಂಧದ ಉರೂಸ್ ಜರುಗಲಿದ್ದು, ಅಂದು ಸಂಜೆ 6 ಗಂಟೆಗೆ ಜಿಂದಾಶಾವಲಿಯವರ ಭಾವಚಿತ್ರ ಮೆರವಣಿಗೆ ಜರುಗಲಿದ್ದು, ಸವಣೂರಿನ ರಬ್ಬಾನಿ ಆರ್ಕೆಸ್ಟ್ರಾ ಸೇರಿದಂತೆ ವಿವಿಧ ತಂಡಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮೆರವಣಿಗೆಯು ಗ್ರಾಮದ ಅಶರಖಾನೆಯಿಂದ ಹೊರಟು ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ನಂತರ ಜಿಂದಾಶಾವಲಿ ದರ್ಗಾಕ್ಕೆ ಆಗಮಿಸಿ ಸಮಾಪ್ತಿಗೊಳ್ಳಲಿದೆ.
ಜ. 22ರ ದೊಡ್ಡ ಉರೂಸ್ ಜರುಗಲಿದ್ದು, ಅಂದು ರಾತ್ರಿ 8 ಗಂಟೆಗೆ ಅಂಜುಮನ್ ಇಸ್ಲಾಂ ಕಮಿಟಿ, ಉರೂಸ್ ಕಮಿಟಿ, ಅಲ್ಲಮಾ ಇಕ್ಬಾಲ್ ಕಮಿಟಿ ಹಾಗೂ ಹಜರತ ಜಿಂದಾಶಾವಲಿ ಗೆಳೆಯರ ಬಳಗ ಕೋಟುಮಚಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕವ್ವಾಲಿ ಕಾರ್ಯಕ್ರಮ ಜರುಗಲಿದ್ದು, ಸಾನ್ನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ನರೇಗಲ್ಲನ ರೈಮಾನಶಾವಲಿ ದರ್ಗಾದ ಖಲಿಫ್ ಮಂಜೂರ ಹುಸೇನಶಾವಲಿ, ರೋಣದ ಗುಲಗಂಜಿ ಮಠದ ಗುರುಪಾದ ಶ್ರೀಗಳು, ರೋಣ ದರ್ಗಾದ ಹಜರತ ಸುಲೇಮಾನ ದರ್ಗಾದ, ಗ್ರಾಮದ ಜೀವನಸಾಬ್ ಮುಲ್ಲಾ ವಹಿಸುವರು. ಉದ್ಘಾಟನೆಯನ್ನು ಶಾಸಕ ಜಿ.ಎಸ್. ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ಉರೂಸ್ ಕಮಿಟಿ ಅಧ್ಯಕ್ಷ ಹುಚ್ಚುಸಾಬ್ ಬೂದಿಹಾಳ ವಹಿಸುವರು.
ಅತಿಥಿಗಳಾಗಿ ಧಾರವಾಡದ ಕೆ.ಸಿ.ಸಿ. ಬ್ಯಾಂಕ್ನ ಅಧ್ಯಕ್ಷ ಐ.ಎಸ್. ಪಾಟೀಲ, ತಾಪಂ ಸದಸ್ಯೆ ಲಲಿತಾ ಅಣ್ಣಿಗೇರಿ, ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ, ಶಿಕ್ಷಕ ಇರ್ಷಾದ ಮುಲ್ಲಾ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಜೀವನಸಾಬ್ ಸರ್ಕಾವಸರ, ಪಿ.ಎಲ್.ಡಿ. ಬ್ಯಾಂಕ್ನ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ತಾಪಂ ಮಾಜಿ ಸದಸ್ಯ ಪ್ರಕಾಶ ಮುದೋಳ, ಗ್ರಾಪಂ ಸದಸ್ಯ ದೇವಪ್ಪ ಬಡಿಗೇರ, ಎಂ.ಆರ್.ಬೂದಿಹಾಳ, ಪ್ರಕಾಶ ಕುಲಕರ್ಣಿ, ಯಲ್ಲಪ್ಪ ಗೆಜ್ಜಿ, ಮಲ್ಲಿಕಾರ್ಜುನ ಕಿತ್ತೂರ, ಶ್ರೀಧರ ಕುಲಕರ್ಣಿ, ಯಲ್ಲಪ್ಪ ಗುರಿಕಾರ, ಅಂದಾನಯ್ಯ ಕುರ್ತಕೋಟಿಮಠ, ಡಿ.ಟಿ. ವಾಲ್ಮೀಕಿ, ಶಿಕ್ಷಕ ಚಮನಸಾಬ್ ಹಿರೇಹಾಳ, ಜೆ.ಜೆ. ಹಿರೇಹಾಳ, ಜೆ.ಎಫ್. ಹಿರೇಹಾಳ, ಆರ್.ಜೆ. ಮೀರಾನಾಯ್ಕ, ಕೆ.ಟಿ. ಮೀರಾನಾಯ್ಕ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಜ. 23ರಂದು ಮರಿ ಉರೂಸ್ (ಜಿಯಾರತ) ಜರುಗಲಿದ್ದು, ಅಂದು ರಾತ್ರಿ 9ಗಂಟೆಗೆ ಗೀಗೀಪದ ನಡೆಯಲಿವೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಬಶೀರ ಹಿರೇಹಾಳ, ಅಕ್ಬರ್ ನಾಗರಾಳ, ಶರಣಪ್ಪ ವಡ್ಡನವರ, ಮಹಮ್ಮದಇಸ್ಮಾಯಿಲ್ ರಾಹುತ, ಮಹಮ್ಮದಇರ್ಷಾದ ಮುಲ್ಲಾ, ಮಂಜುನಾಥ ಬ್ಯಾಳಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement