ಇಚ್ಛಾಶಕ್ತಿ ಕೊರತೆ: ಯೋಜನೆ ವಿಫಲ
ಮುಂಡರಗಿ: ಸರ್ಕಾರ ಎಲ್ಲ ಇಲಾಖೆಗಳಿಂದಲೂ ವಿಕಲಚೇತನರಿಗಾಗಿ ಸೌಲಭ್ಯ ಒದಗಿಸುತ್ತಿದೆ. ಸಾರ್ವಜನಿಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸರ್ಕಾರಿ ಯೋಜನೆಗಳು ವಿಫಲವಾಗುತ್ತಿವೆ ಎಂದು ಮನೋವಿಕಾಸ ಸಂಸ್ಥೆಯ ಸಂಸ್ಥಾಪಕ ಜೆ.ಕೆ. ಹಿರೇಮಠ ಹೇಳಿದರು. ಅವರು ಶನಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮುಂಡರಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಡರಗಿ, ಸುಜಲಾನ್ ಫೌಂಡೇಶನ್, ಮನೋವಿಕಾಸ ಸಂಸ್ಥೆ ಹುಬ್ಬಳ್ಳಿ, ಆಯುಷ್ ಇಲಾಖೆ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಜಲಾನ್ ಫೌಂಡೇಶನ್ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ವಿಕಲಚೇತನ ಮಕ್ಕಳ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಡಾ. ಪಾಂಡುರಂಗ ಕಬಾಡಿ ಮಾತನಾಡಿ, ಈ ಹಿಂದೆ ಪೋಲಿಯೋದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅನೇಕ ಮಕ್ಕಳು ಅಂಗವಿಕಲತೆಗೆ ತುತ್ತಾಗುತ್ತಿದ್ದರು. ಆದರೆ ಸರ್ಕಾರ ಅದಕ್ಕಾಗಿ ಪ್ರತಿವರ್ಷ ಪೋಲಿಯೋ ಹನಿಗಳನ್ನು ಹಾಕಿಸುವ ವ್ಯವಸ್ಥೆಯಿಂದ ಅನೇಕ ಮಕ್ಕಳನ್ನು ಅಂಗವಿಕಲತೆಯಿಂದ ದೂರು ಮಾಡಿದಂತಾಗಿದೆ ಎಂದರು. ರಾಜೇಂದ್ರಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಕ್ಕಳನ್ನು ತಪಾಸಣೆ ಮಾಡಲಾಯಿತು. ಶಿಶು ಅಭಿವೃದ್ಧಿ ಇಲಾಖೆಯ ಲಲಿತಾ ಹೊಸಳ್ಳಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆಯುರ್ವೇದ ವೈದ್ಯಾಧಿಕಾರಿ ಡಾ. ಪಿ.ಬಿ. ಹಿರೇಗೌಡ್ರ, ಸುಜಲಾನ್ ಫೌಂಡೇಶನ್ನ ಪ್ರಾದೇಶಿಕ ವ್ಯವಸ್ಥಾಪಕ ಬಿ. ಪ್ರಹ್ಲಾದ್, ದೀಪಕ್ ಕ್ಷೀರಸಾಗರ ಮುಂತಾದವರು ಉಪಸ್ಥಿತರಿದ್ದರು. ಡಾ. ಡಿ.ಎ. ದೇಸಾಯಿ ಸ್ವಾಗತಿಸಿದರು. ಅವಿನಾಶ ಗೋಡಕಿಂಡಿ ನಿರೂಪಿಸಿದರು. ಎಲ್.ಬಿ. ಹೊಸಳ್ಳಿ ವಂದಿಸಿದರು.