ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಅನ್ನದಾನ ಶ್ರೀ
ನರೇಗಲ್ಲ: ಇಂಧನ ಬರಿದಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಇಂಧನಕ್ಕೆ ಬೇಕಾದ ಗಿಡಮರಗಳನ್ನು ಬೆಳೆಸಬೇಕೆಂಬ ದೃಢ ನಿರ್ಧಾರವನನ್ನು ಪ್ರತಿಯೊಬ್ಬರೂ ಕೈಗೊಂಡಲ್ಲಿ ಈ ದೇಶದ ಸಮಸ್ಯೆ ಬಗೆಹರಿಸಲು ಸಾಧ್ಯ. ಜತೆಗೆ ಸರ್ಕಾರಕ್ಕೆ ಸಹಾಯ ಮಾಡಿದಂತಾಗುತ್ತದೆ ಎಂದು ಅನ್ನದಾನ ಶ್ರೀಗಳು ಹೇಳಿದರು.
ಸ್ಥಳೀಯ ಅನ್ನದಾನೇಶ್ವರ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಾವಯವ ಕೃಷಿ ಅಭಿವೃದ್ಧಿ, ಗೋ ಸಂರಕ್ಷಣೆ, ಇಂಧನ ಉಳಿತಾಯ ಹಾಗೂ ಜೈವಿಕ ಇಂಧನ ಬಳಕೆ ಕುರಿತು ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಮನೆಯಲ್ಲಿ ದನ-ಕರುಗಳನ್ನು ಸಾಕಿ, ಜೈವಿಕ ಇಂಧನ ದೊರೆಯುವ ಗಿಡ-ಮರಗಳನ್ನು ಬೆಳೆಸಿ ಎಂದರು.
ಖೇಡಗಿ ವಿರಕ್ತಮಠದ ಶಿವಬಸವ ರಾಜೇಂದ್ರ ಶ್ರೀಗಳು, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಗರಗನಾಗಲಾಪುರದ ಒಪ್ಪತ್ತೇಶ್ವರ ಮಠದ ಮರಿಮಹಾಂತ ಶ್ರೀಗಳು, ಅಮಿನಗಡದ ಪ್ರಭುಶಂಕರೇಶ್ವರ ಮಠದ ಶಂಕರರಾಜೇಂದ್ರ ಶ್ರೀಗಳು, ಜಿಗೇರಿಯ ಗುರುಬಸವ ಶಿವಾಚಾರ್ಯರು ಹಾಗೂ ಅಣ್ಣಿಗೇರಿಯ ಪ್ರಭುಲಿಂಗ ದೇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಶಾಲಾ-ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿ ಭಾಗವಹಿಸಿದ್ದರು.